ದಿನದ ಸುದ್ದಿ

ಸಾವಿರ ರೂ. ಹೊಸ ನೋಟಲ್ಲಿ ಗುಜರಾತ್ ರಾಣಿ ಉದಯಮತಿ ಇತಿಹಾಸ ?

Published

on

ಸುದ್ದಿದಿನ ಡೆಸ್ಕ್: ಹೊಸದಾಗಿ ಬಿಡುಗಡೆಯಾಗಲಿರುವ ಸಾವಿರ ರೂ.ನೋಟುಗಳಲ್ಲಿ ಗುಜರಾತ್ ರಾಣಿ ಉದಯಮತಿ ಇತಿಹಾಸ ಇದೆ ಎನ್ನುವ ವಿಷಯ ಈಗ ಜಾಅಲತಾಣಗಳಲ್ಲಿ ಹರಿದಾಡುತ್ತಿವೆ.

ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿರೋ 100 ರ ಹೊಸ ನೋಟಿಗೂ.. ಗುಜರಾತ್‌ನ ರಾಣಿಗೂ, ಪ್ರಧಾನಿ ಮೋದಿಗೂ ಒಂದು ಲಿಂಕ್ ಇದೆ. ಅದೇನಪ್ಪಾ ಅಂದ್ರೆ ರಿಲೀಸ್ ಆಗಲಿರೋ ಹೊಸ 100 ರ ನೋಟಿನಲ್ಲಿ ಗುಜರಾತ್ ರಾಣಿಯ ಇತಿಹಾಸವನ್ನ ಸಾರುವ ರಾಣಿ ಕಿ ವಾವ್ ಚಿತ್ರವನ್ನ ಸೇರಿಸಿದೆ.

ಈ ರಾಣಿ ಕಿ ವಾವ್ ಗುಜರಾತ್‌ನ ಪಠಾಣ್‌ನಲ್ಲಿರೋ ಪಾರಂಪರಿಕ ಸ್ಥಳ. ಯುನ್ಸ್ಕೋನ ವಿಶ್ವ ಪ್ರಸಿದ್ದ ಪಾರಂಪರಿಕ ಸ್ಥಳಗಳ ಪೈಕಿ ಇದೂ ಒಂದು.. ಈ ರಾಣಿ ಕಿ ವಿವಾ ತಲೆ ಕೆಳಗಾದ ದೇವಸ್ಥಾನವೂ ಹೌದು ಹಾಗೂ ಜಲ ಶೇಖರಣೆ ಮಾಡುವ ಮೆಟ್ಟಿಲಿನ ಬಾವಿಯೂ ಕೂಡ.. ನಿಜಕ್ಕೂ ಇದರ ನಿರ್ಮಾಣ ಅಚ್ಚರಿ ಆಗುತ್ತೆ. ಇಂತಹ ಒಂದು ಸ್ಮಾರಕವನ್ನ ನಿರ್ಮಿಸಿದ ಆ ರಾಣಿಯ ಹೆಸರು ಉದಯಮತಿ.

11 ನೇ ಶತಮಾನದಲ್ಲಿ ಚೌಲುಕ್ಯ ಸಾಮ್ರಾಜ್ಯದ ಭೀಮ ಮಹಾರಾಜನ ನೆನಪಿಗಾಗಿ ರಾಣಿ ಉದಯಮತಿ ಮತ್ತು ಮಗ ಕರ್ಣ ಈ ದೇವಾಲಯದ ಬಾವಿಯನ್ನ ನಿರ್ಮಿಸಿದ್ರು.. ಈ ದೇವಾಲಯದ ಪಕ್ಕದಲ್ಲೇ ಸರಸ್ವತಿ ನದಿ ಹರೀತಿರೋದ್ರಿಂದ ಅಲ್ಲಿನ ನೀರನ್ನ ಇಲ್ಲಿ ಶೇಖರಣೆ ಮಾಡಲಾಗ್ತಿತ್ತು.. ಈ ದೇವಾಲಯದಲ್ಲಿ ವಿಷ್ಣು, ರಾಮ, ಕೃಷ್ಣ, ನರಸಿಂಹ, ವಾಮನ ವರಾಹಿ ದೇವರುಗಳು ಸೇರಿದಂತೆ ಅನೇಕ ಶಿಲಾಕೃತಿಗಳನ್ನ ಕೆತ್ತಲಾಗಿದೆ.. ಏಳು ಗ್ಯಾಲರಿಗಳಲ್ಲಿ ಸುಮಾರು 800 ಕಲಾಕೃತಿಗಳಿರೋ ಈ ರಾಣಿ ಕಿ ವಾವ್ ಇವತ್ತಿಗೂ ತನ್ನ ಸೌಂದರ್ಯವನ್ನ ಕೆಡಿಸಿಕೊಳ್ಳದೇ ಪ್ರವಾಸಿಗರನ್ನ ಆಕರ್ಷಿಸುತ್ತಿದೆ..

ಸದ್ಯ ಈ ರಾಣಿ ಕಿ ವಾವ್ ಭಾರತದ ಮೆಟ್ಟಿಲಿನ ಭಾವಿ ಎಂದೇ ಖ್ಯಾತವಾಗಿದೆ. ಇದರ ತಳದಲ್ಲೊಂದು ಸುರಂಗಕ್ಕೆ ಬಾಗಿಲಿದ್ದು ಇಲ್ಲಿಂದ ಹೊರ ನಡೆದರೆ 30 ಕಿ.ಮೀ ದೂರದ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ.. ಇನ್ನು ಈ ದೇವಾಲಯದ ಸುತ್ತ ಮುತ್ತ 50-60 ವರ್ಷಗಳ ಹಿಂದೆ ಆಯುರ್ವೇದ ಔಷಧಿಗೆ ಸಂಬಂಧಿಸಿದ ಗಿಡಗಳಿದ್ದವಂತೆ. ಇದರ ಪರಿಣಾಮವೋ ಏನೋ ಈ ಬಾವಿಯಲ್ಲಿನ ನೀರು ಇಂದಿಗೂ ಔಷಧಿಯಾಗಿ ಬಳಸಲಾಗ್ತಿದ್ಯಂತೆ. ಜ್ವರ ಸೇರಿದಂತೆ ಹಲವಾರು ರೋಗಗಳಿಗೆ ಈ ಬಾವಿಯ ನೀರು ಮದ್ದಂತೆ..

ರಾಣಿ ಉದಯಮತಿ ತನ್ನ ಪತಿಗಾಗಿ ನಿರ್ಮಿಸಿದ ಈ ದೇವಾಲಯದ ಬಾವಿ ಮೋದಿ ಮನಸ್ಸನ್ನ ಸೂರೆಗೊಂಡಿದೆ. ಹಾಗಾಗಿ ಇದನ್ನ 2016 ರಲ್ಲಿ ಮೋದಿ ಅವರು ಸ್ವಚ್ಚ ಪಾರಂಪರಿಕ ತಾಣ ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲ ಮಹೇಶ ಬಾಬು ನಟಿಸಿರೋ ತೆಲಗಿನ ದೂಕುಡು ಚಿತ್ರದ ಶೂಟಿಂಗ್ ಕೂಡ ಇಲ್ಲೇ ನಡೆದಿದೆ. ಇದೀಗ ಮೋದಿ ಬಿಡುಗೆಡೆ ಮಾಡಲಿರೋ 100ರ ನೋಟಿನಲ್ಲೂ ಸ್ಥಾನ ಪಡೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version