/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಆಯನೂರಲ್ಲಿ ನಿರಾಶ್ರಿತರ ಎತ್ತಂಗಡಿ| ಚಿಂತಕ ದ್ವಾರಕಾನಾಥ್ ಕೆಂಡಾ ಮಂಡಲ | ವಿಡಿಯೋ ನೋಡಿ..!

Published

on

ಸುದ್ದಿದಿನ ಡೆಸ್ಕ್ | ಶಿವಮೊಗ್ಗದ ಆಯನೂರು ಹೋಬಳಿ ವ್ಯಾಪ್ತಿಯ ವೀರಬೆನಹಳ್ಳಿ ಸ.ನಂ.78ರ ಜಮೀನಲ್ಲಿ ಸುಮಾರು 20ವರ್ಷದಿಂದ ಅಲೆಮಾರಿ ಹಕ್ಕಿಪಿಕ್ಕಿ ಜನಾಂಗದವರನ್ನು ಏಕಾಏಕಿ ಎತ್ತಂಗಡಿ ಮಾಡಿರುವ ಬಗ್ಗೆ ಚಿಂತಕ ದ್ವಾರಕಾನಾಥ್ ಕೆಂಡಾಮಂಡಲವಾಗಿದ್ದಾರೆ.

ಈ ಬಗ್ಗೆ ಅವರು ಫೇಸ್ ಬುಕ್ ನಲ್ಲಿ ಪ್ರಕಟಿಸಿರುವ ಪೋಸ್ಟ್ ವೊಂದು ವೈರಲ್ ಆಗಿದೆ. ಆ ಸಾಲುಗಳು ಇಲ್ಲಿವೆ.

“ಹಕ್ಕಿಪಿಕ್ಕಿಯವರಿಗೆ 4ಎಕರೆಯನ್ನು ಕಾಗೋಡು ತಿಮ್ಮಪ್ಪ ಅವರು ಮಂಜೂರು ಮಾಡಿಸಿದ್ದರು.. ನಿನ್ನೆ ಸರಿರಾತ್ರಿ ತಹಸೀಲ್ದಾರ್ ಮತ್ತು ಅರಣ್ಯ ಅಧಿಕಾರಿಗಳು ಏಕಾಏಕಿ ಈ ಅಸಹಾಯಕರ ಮೇಲೆ ದಾಳಿ ಮಾಡಿ ಅಡ್ಡಬಂದ ಹೆಂಗಸರು ಮಕ್ಕಳನ್ನು ಬಾಸುಂಡೆ ಬರುವಂತೆ ಅಮಾನುಷವಾಗಿ ಬಡಿದು JCB ಯಲ್ಲಿ ಗುಡಾರಗಳನ್ನು ನೆಲಸಮ ಮಾಡಿ, ಶ್ರೀರಾಮಪುರದ ಖಾಸಗಿ ಜಮೀನಿನಲ್ಲಿ ಇವರ ಬದುಕುಗಳನ್ನು ಎಸೆದು ಹೋಗಿದ್ದಾರೆ! ನೆಲೆಯಿಲ್ಲದ ಹಕ್ಕಿಪಿಕ್ಕರು ಬೀದಿಗೆ ಬಿದ್ದಿದ್ದಾರೆ!

ಪೋನಿನ ಮೇಲೆ ಪೋನುಗಳು ಬರುತ್ತಿವೆ, ನಾನು ನಿಸ್ಸಹಾಯಕ.. ನನ್ನ ಬಳಿ ಯಾವ ಅಧಿಕಾರವೂ ಇಲ್ಲ, ಆದರೂ ಯಾರುಯಾರಿಗೋ ಪ್ರಯತ್ನಿಸುತಿದ್ದೇನೆ.. ನನ್ನ ಆಪ್ತರಾದ ಕೆಲವು ಮಂದಿ ಪತ್ರಕರ್ತರಿಗೆ ಹೇಳಿದ್ದೇನೆ.. ಇದನ್ನು ನೋಡಿಯಾದರೂ ಜಿಲ್ಲಾಡಳಿತ ಕಣ್ಣು ತೆರೆಯಲಿ ಎಂದು, ಭಾನುವಾರ(ಜುಲೈ 29) ಯಾವ ಅಧಿಕಾರಿಗಳೂ ಸಿಗುತ್ತಿಲ್ಲ.ನಮ್ಮ ಸಂಘಟನೆಯ ಚಾವಡೆ ಲೋಕೇಶ್ ಸ್ಥಳಕ್ಕೆ ಹೋಗಿದ್ದಾರೆ. ಅವರು ಸಮಸ್ಯೆ ಕುರಿತಂತೆ ತೋರಿಸುತಿದ್ದಾರೆ”.

ಈ ವಿಡಿಯೋ ನೋಡಿ

ಇದನ್ನು ನೋಡಿಯಾದರೂ ಯಾರಾದರೂ ಅಧಿಕಾರಿ ಅಥವ ಜನನಾಯಕರು ಈ ಅಸಹಾಯಕ ಅಲೆಮಾರಿಗಳ ನೆರವಿಗೆ ಬರುತ್ತಾರೆಂಬ ಸಣ್ಣ ನಂಬಿಕೆ‌, ಹಾಗೆ ನೆರವಾದರೆ ಇಲ್ಲಿ ಹಾಕಿದ್ದು ಸಾರ್ಥಕ. ಇಂದು ಮಾನವ ಹಕ್ಕುಗಳ ಆಯೋಗದ ಮುಂದೆ ಈ ಸಮಸ್ಯೆಯನ್ನು ಮಂಡಿಸಲಿದ್ದೇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version