ದಿನದ ಸುದ್ದಿ
ಕರ್ನಾಟಕ ವಿಧಾನಮಂಡಲದ ಅಧಿವೇಶನ ನಾಳೆಯಿಂದ ಆರಂಭ
ಸುದ್ದಿದಿನ, ದಾವಣಗೆರೆ : ಕರ್ನಾಟಕ ವಿಧಾನಮಂಡಲ (Vidhana Mandala) ಅಧಿವೇಶನ (session) ನಾಳೆಯಿಂದ ಆರಂಭವಾಗಲಿದ್ದು, ಬರುವ 23ರವರೆಗೆ ಕಲಾಪ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಉಂಟಾಗಿರುವ ಹಾನಿ ಸೇರಿ ಜ್ವಲಿಂತ ಸಮಸ್ಯೆಗಳ ಕುರಿತು ಸದನದಲ್ಲಿ ಪ್ರಮುಖವಾಗಿ ವಿಚಾರ ಚರ್ಚೆಗೆ ಬರುವ ಸಂಭವವಿದೆ.
ಕಳೆದ ಅಧಿವೇಶನದಿಂದ ಇದೂವರೆಗೆ ಅಗಲಿದ ಗಣ್ಯರಿಗೆ ಮೊದಲನೆ ದಿನ ಉಭಯ ಸದನಗಳಲ್ಲಿ ಸಂತಾಪ ನಿರ್ಣಯ ಮಂಡಿಸಿ ರಾಜಕೀಯ ಪಕ್ಷಗಳ ಮುಖಂಡರು ಗೌರವ ನಮನ ಸಲ್ಲಿಸುವ ಕಾರ್ಯಕ್ರಮವಿದೆ.
ವಿದಾನಸಭೆಯ ಕಲಾಪ ಪಟ್ಟಿಯ ಮಾಹಿತಿಯಂತೆ ಕಳೆದ ವಾರ ನಿಧನರಾದ ಸಚಿವ ಉಮೇಶ್ ಕತ್ತಿ ಸೇರಿದಂತೆ ಗಣ್ಯರಿಗೆ ಸಂತಾಪ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಈ ಮಧ್ಯೆ ರಾಜಕೀಯ ಪಕ್ಷಗಳ ನಾಯಕರು ಸಭೆ ಸೇರಿ ಸದನದಲ್ಲಿ ಕೈಗೊಳ್ಳುವ ಕಾರ್ಯಗಳ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ ಎಂದು ರಾಜಕೀಯ ಪಕ್ಷಗಳ ವಕ್ತಾರರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243