ದಿನದ ಸುದ್ದಿ

ವೀಡಿಯೋ ವೈರಲ್ | ಅನಾಥ ಶವ ಹೊತ್ತು ಅಂತ್ಯಕ್ರಿಯೆ ನಡೆಸಿದ ಮಹಿಳಾ ಎಸ್ ಐ : ನೆಟ್ಟಿಗರಿಂದ ಭಾರೀ ಮೆಚ್ಚುಗೆ..!

Published

on

ಸುದ್ದಿದಿನ,ಅಮರಾವತಿ: ಅನಾಥ ಶವವನ್ನು ಮಹಿಳಾ ಎಸ್‍ಐ ತನ್ನ ಹೆಗಲ ಮೇಲೆ ಇಟ್ಟು ಸುಮಾರು ಎರಡು ಕಿಲೋಮೀಟರ್ ದೂರ ಹೊತ್ತು ನಡೆದು ಅಂತ್ಯಕ್ರಿಯೆ ನಡೆಸಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಮಹಿಳಾ ಎಸ್‍ಐ ಶಿರೀಶಾ ಅನಾಥ ಶವವನ್ನು ಹೊತ್ತು ಸಾಗಿ ಅಂತ್ಯಕ್ರಿಯೆ ನಡೆಸಿದ ಅಧಿಕಾರಿ. ಶಿರೀಶಾ ಅವರು ಕಾನಿಗುಬ್ಬ ಪೋಲಿಸ್ ಠಾಣೆಯಲ್ಲಿ ಎಸ್ ಐ ಆಗಿ ಕಾರ್ಯನಿರ್ವಹಿಸುತ್ತಾರೆ. ಇವರ ಅನಾಥ ಶವವನ್ನು ಹೊತ್ತು ಹೋಗಿ ಅಂತ್ಯಕ್ರಿಯೆ ಮಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಎಸ್‍ಐ ಶಿರೀಶಾ ಮಾನವೀಯತೆ ಕಂಡು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಅವಿಕೊತ್ತೂರು ಎಂಬ ಗ್ರಾಮದ ಜಮೀನಿನಲ್ಲಿ ಶವವೊಂದು
ಪತ್ತೆಯಾಗಿತ್ತು. ಶವದ ಸ್ಥಳ ಪರಿಶೀಲನೆಗೆ ಹೋದಾಗ ಗ್ರಾಮಸ್ಥರು ಅನಾಥ ಶವವನ್ನು ಹೊತ್ತು ಅಂತ್ಯಕ್ರಿಯೆ ಮಾಡಲು ಮುಂದೆ ಬರದ ಕಾರಣ, ಎಸ್‍ಐ ತಾವೇ ಶವವವನ್ನು ಹೊತ್ತುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದಾರೆ.

ಒಬ್ಬ ವ್ಯಕ್ತಿ ಮತ್ತು ಎಸ್‍ಐ ಶಿರೀಶಾ ಅವರು ತಮ್ಮ ಹೆಗಲ ಮೇಲೆ ಶವವನ್ನು ಹೊತ್ತು ಜಮೀನಿನಿಂದ ಅವರ ವಾಹನವಿದ್ದ ಸ್ಥಳದವರೆಗೆ ಸುಮಾರು 2 ಕೀಲೋಮೀಟರ್ ದೂರ ನಡೆದುಕೊಂಡೇ ಹೋಗಿ ಅಂತ್ಯಕ್ರಿಯೆ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version