ದಿನದ ಸುದ್ದಿ
ಆಂಧ್ರದಲ್ಲಿ ತಲೆ ಎತ್ತಲಿದೆ ಏಕತಾ ಮೂರ್ತಿಗಿಂತ ಅತಿ ಎತ್ತರ ಕಟ್ಟಡ..!
ಸುದ್ದಿದಿನ, ಹೈದರಾಬಾದ್: ತಮ್ಮ ರಾಜ್ಯದೊಳಗೆ ಸಿಬಿಐ ಪ್ರವೇಶಿಸದಂತೆ ನಿರ್ಬಂಧ ಹೇರಿ ಸುದ್ದಿಯಾಗಿದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಖಂಡ ಆಂಧ್ರ ಪ್ರದೇಶ ರಾಜ್ಯ ವುಭಜನೆಯಾದ ನಂತರ ಎರಡು ರಾಜ್ಯಗಳಿಗೂ ರಾಜಧಾನಿ ಹಾಗೂ ವಿಧಾನ ಸಭೆಯ ಸಮಸ್ಯೆ ಉಂಟಾಗಿತ್ತು. ಈಗ ಆ ಸಮಸ್ಯೆ ಅಂತ್ಯವಾಗುತ್ತಿದ್ದು, ವಿಧಾನ ಸಭಾ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ವಿಶೇಷವೇನೆಂದರೆ ಈ ಕಟ್ಟಡ ಏಕತಾ ಮೂರ್ತಿಗಿಂತ ಎತ್ತರದು ಎಂಬುದು..!
ಹೌದು, ಆಂಧ್ರ ಪ್ರದೇಶ ರಾಜಧಾನಿ ಅಮರಾವತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಧಾನಸೌಧದ ಕಟ್ಟಡ ದೇಶದ ಅತಿ ಎತ್ತರದ ಗುಜರಾತಿನ ಸರ್ದಾರ್ ವಲ್ಲಭಭಾಯಿ ಪಟೇಲರ ಏಕತಾ ಮೂರ್ತಿಗಿಂತ ಎತ್ತರದಾಗಲಿದೆ. ಭಾರತದ ಏಕತಾ ಮೂರ್ತಿ 182 ಮೀಟರ್ ಎತ್ತರದಾಗಿದ್ದು ಇದು ದೇಶದ ಅತ್ಯಂತ ಎತ್ತರ ಮೂರ್ತಿಯಾಗಿದೆ. ಆದರೆ, ಆಂಧ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಧಾನಸೌಧದ ಕಟ್ಟಡ ಏಕತಾ ಮೂರ್ತಿಗಿಂತ 68 ಮೀಟರ್ ಎತ್ತರದಾಗಲಿದೆ. ಅಂದರೆ, 256 ಮೀಟರ್ ಎತ್ತರದಲ್ಲಿ ನಿರ್ಮಾಣವಾಗಲಿದೆ.
ಈಚೆಗಷ್ಟೇ ಮೋದಿ ನೇತೃತ್ವದ ಸರ್ಕಾರದಲ್ಲಿ ಟಿಡಿಪಿ ಪಕ್ಷದ ಸಂಸದರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮೈತ್ರಿ ಮುರಿದುಕೊಳ್ಳಲು ಮುಂದಾಗಿದ್ದರು. ಈಗ ಮೋದಿ ನಿರ್ಮಿಸಿದ ಏಕತಾ ಮೂರ್ತಿಗಿಂತ 68 ಮೀಟರ್ ಎತ್ತರದ ಕಟ್ಟಡ ನಿರ್ಮಿಸಲು ಮುಂದಾಗುತ್ತಿದ್ದಾರೆ. ವಿಧಾನಸೌಧದ ಕಟ್ಟಡ ನೀಲನಕ್ಷೆಯಲ್ಲಿ ಕೆಲವು ಬದಲಾವಣೆ ಹೊರತುಪಡಿಸಿದರೆ ಅಂತಿಮವಾಗಿದೆ. ವಿಧಾನಸೌಧದ ನಿರ್ಮಾಣ ಹೊಣೆಯನ್ನು ಯುಕೆ ಮೂಲದ ನಾರ್ಮನ್ ಫೋಸ್ಟರ್ಸ್ ಎಂಬ ನಿರ್ಮಾಣ ಕಂಪನಿ ಹೊತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401