ಸಿನಿ ಸುದ್ದಿ
ಇಂಟರ್‌ನೆಟ್ ಲೋಕದಲ್ಲಿ ಧೂಳೆಬ್ಬಿಸಿದ ಸನ್ನಿಲಿಯೋನ್ ‘ಬಯೋಪಿಕ್’ ಟ್ರೇಲರ್..!
ಸುದ್ದಿದಿನ ಡೆಸ್ಕ್ : ಬಾಲಿವುಡ್‌ನ ಹಾಟ್ ಬೆಡಗಿ ಸನ್ನಿ ಲಿಯೋನ್ ಜೀವನ ಚಿರಿತ್ರೆ ಕುರಿತ ವೆಬ್ ಸರಣಿ ಸದ್ಯದಲ್ಲೇ ಪ್ರಸಾರವಾಗಲಿದ್ದು, ಇದರ ಟ್ರೇಲರ್ ಶುಕ್ರವಾರ ಇಂಟರ್‌ನೆಟ್ ಲೋಕವನ್ನು ಧೂಳೆಬ್ಬಿಸಿದೆ.
ಕರನ್‌ಜಿತ್ ಕೌರ್: ದಿ ಅನ್ ಟೋಲ್ಡ್ ಸ್ಟೋರಿ
ಆಫ್ ಸನ್ನಿ ಲಿಯೋನ್ ಹೆಸರಿನ ವೆಬ್ ಸರಣಿಯು ಜುಲೈ. 16ರಿಂದ ಜೀ.5 ವೆಬ್ ತಾಣದಲ್ಲಿ ಪ್ರಸಾರವಾಗಲಿದೆ. ಈ ವೆಬ್ ಸರಣಿಯ ಟ್ರೇಲರ್‌ಅನ್ನು ಸನ್ನಿ ಲಿಯೋನ್ ಅವರು ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಇದನ್ನು 20 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ವೆಬ್ ಸರಣಿಯ ಟ್ರೇಲರ್ ಸನ್ನಿ ಲಿಯೋನ್ ಅವರು ಗ್ರೀನ್ ರೂಂನಲ್ಲಿರುವ ಸೀನ್‌ನಿಂದ ಆರಂಭವಾಗುತ್ತದೆ. ಕರನ್‌ಜಿತ್ ಕೌರ್ ಹೆಸರಿನ ಹುಡುಗಿಯು ಅಡಲ್ಟ್ ಸಿನಿಮಾ ಕ್ಷೇತ್ರಕ್ಕೆ ಕಾಲಿಡಲು ಕಾರಣವೇನು? ಆಕೆಯ ಕುಟುಂಬದ ಕಷ್ಟಗಳೇನಿದ್ದವು? ಸ್ವಂತ ಕಾಲಿನ ಮೇಲೆ ನಿಲ್ಲುವ ಸಲುವಾಗಿ ಪೇಪರ್ ಹಾಕುತ್ತಿದ್ದ ಹುಡುಗಿ ಹಣಕ್ಕಾಗಿ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಾಗ ಜಗತ್ತು ಆಕೆಯನ್ನು ಹೇಗೆ ನೋಡಿತು. ಪಾರ್ನ್ ಲೋಕದಲ್ಲಿ ಆಕೆ ಅವಕಾಶಗಳು ಅರಸಿ ಬಂದದ್ದು ಹೇಗೆ ಎಂಬೆಲ್ಲ ತುಣುಕುಗಳು ಟ್ರೇಲರ್‌ನಲ್ಲಿವೆ.
ಸನ್ನಿಲಿಯೋನ್ ಅವರು ಈ ವಿಷಯ ಬಹಿರಂಗಪಡಿಸಿದ ಬೆನ್ನಿಗೇ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದ್ದ ಪರ ವಿರೋಧದ ನಿಲುವುಗಳು ವ್ಯಕ್ತವಾಗುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401