ಲೋಕಾರೂಢಿ

ಶೋಷಿತ ಸಮುದಾಯಗಳ ಏಳಿಗೆಗೆ ಆರ್ಥಿಕ ಶಕ್ತಿ ಗಳಿಸುವುದೇ ಅಂತಿಮ ಪರಿಹಾರ

Published

on

Photo courtesy : The Guardian

ಲ್ಲರೂ ಹೇಳುತ್ತಾರೆ ಶೋಷಿತ ಸಮುದಾಯಗಳ ಏಳಿಗೆಗೆ ರಾಜಕೀಯ ಶಕ್ತಿ ಮಾಸ್ಟರ್ ಕೀ ಎಂದು. ಆದರೆ ವಾಸ್ತವ ಎಂದರೆ ಸದ್ಯದ ಜಾಗತೀಕರಣ ಮತ್ತು ಉದಾರೀಕರಣದ ಯುಗದಲ್ಲಿ ಆರ್ಥಿಕ ಶಕ್ತಿ ವಿಮೋಚನೆಯ ಪ್ರಬಲ ಅಸ್ತ್ರವಾಗುತ್ತದೆ. ಏಕೆಂದರೆ ರಾಜಕೀಯ ಅಧಿಕಾರ ಎಲ್ಲರೂ ಗಳಿಸುವುದು ಅಸಾಧ್ಯ. ಅದೂ ಅಲ್ಲದೇ ಈಗಿನ ಜಂಟಿ ಚುನಾಯಕ ಯುಗದಲ್ಲಿ ಅದಕ್ಕಾಗಿ ಭಾರಿ ಸರ್ಕಸ್ ಮಾಡಬೇಕಾಗುತ್ತದೆ. ಹಾಗೆಯೇ ರಾಜಕೀಯದಲ್ಲಿ ಭಾಗವಹಿಸುವವರ ಸಂಖ್ಯೆ ಕೂಡ ಕಡಿಮೆ. ಎಲ್ಲರೂ ಅತ್ತ ಪ್ರಯತ್ನ ಪಡಲಾಗುವುದಿಲ್ಲ. ಆದರೆ ಆರ್ಥಿಕ ಕ್ಷೇತ್ರ ಹಾಗಲ್ಲ. ಎಲ್ಲರೂ ಪ್ರಯತ್ನ ಪಡಬಹುದು, ಗಳಿಸಬಹುದು. ಇದಕ್ಕೆ ತಾಜಾ ಉದಾಹರಣೆ ಮುಸ್ಲಿಂ ಸಮುದಾಯ.

ರಾಜಕೀಯ ಮಾಡಬೇಕೆಂದರೆ ಜಾತಿ ಬಹು ದೊಡ್ಡ ತಡೆಗೋಡೆಯಾಗುತ್ತದೆ. ನಿಜ ಆರ್ಥಿಕ ಕ್ಷೇತ್ರದಲ್ಲೂ ಅದು ತಡೆಯಾಗುತ್ತದೆ. ಆದರೆ ಆರ್ಥಿಕ ಕ್ಷೇತ್ರದಲ್ಲಿ ಅವಕಾಶಗಳು ಜಾಸ್ತಿ ಯಾರು ಬೇಕಾದರೂ ಅದರಲ್ಲಿ ಭಾಗವಹಿಸಬಹುದು. ಮುಖ್ಯವಾಗಿ ಪ್ರಾಮಾಣಿಕ ಪ್ರಯತ್ನ ಮತ್ತು ದುಡಿಮೆಯನ್ನು ಅದು ಬಯಸುತ್ತದೆ. ಹಾಗೆಯೇ ನಿರುದ್ಯೋಗ ಶೋಷಿತ ಸಮುದಾಯಗಳ ಬಹು ದೊಡ್ಡ ಸಮಸ್ಯೆ. ಅಂದಹಾಗೆ ಈ ಸಮಸ್ಯೆಯನ್ನು ಸರ್ಕಾರದ ಕೃಪೆಗೆ ಬಿಟ್ಟು ನಾವು ಏನನ್ನೂ ಸ್ವಂತ ಪ್ರಯತ್ನ ಪಡದಿದ್ದರೆ ವಿಮೋಚನೆ ಹೊಂದುವುದಾದರೂ ಹೇಗೆ? ಹಾಗೆಯೇ ಸರ್ಕಾರಿ ನೌಕರಿಗಳು ಈಚಿನ ದಿನಗಳಲ್ಲಿ ಶೋಷಿತ ಸಮುದಾಯಗಳ ಯುವಕರಿಗೆ ಗಗನಕುಸುಮವಾಗುತ್ತಿವೆ.

ಹೀಗಿರುವಾಗ ಪರ್ಯಾಯ ಯೋಚಿಸದೆ ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಹೋರಾಟಕ್ಕಿಂತ ಆರ್ಥಿಕ ಶಕ್ತಿ ಗಳಿಸುವ ಹೋರಾಟಕ್ಕೆ ಶೋಷಿತ ಸಮುದಾಯಗಳು ಹೆಚ್ಚು ಆದ್ಯತೆ ಕೊಡಬೇಕಿದೆ. ಆರ್ಥಿಕವಾಗಿ ಉದ್ಯೋಗ ಬೇಡುವವರಿಗಿಂತ ನಾವು ನೀಡುವವರಾಗಿ ಬದಲಾಗಬೇಕಿದೆ. ಆಗ ಅಂತಹ ಸಂದರ್ಭದಲ್ಲಿ ನಾವು ಗಳಿಸುವ ಆರ್ಥಿಕ ಶಕ್ತಿಯನ್ನು ರಾಜಕೀಯ, ಧಾರ್ಮಿಕ, ಸಾಮಾಜಿಕ ಎಲ್ಲಾ ಕ್ಷೇತ್ರಕ್ಕೂ ಬಳಸಬಹುದು. ಈ ನಿಟ್ಟಿನಲ್ಲಿ ಆರ್ಥಿಕ ಶಕ್ತಿ ಶೋಷಿತ ಸಮುದಾಯಗಳ ವಿಮೋಚನೆಯ ಅಸ್ತ್ರ ಎಂಬುದನ್ನು ನಾವೆಲ್ಲ ಅರಿಯಬೇಕಾಗಿದೆ, ಗಳಿಸಲು ಮುನ್ನುಗ್ಗಬೇಕಾಗಿದೆ.

ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version