ಸಿನಿ ಸುದ್ದಿ
ದಿ ವಿಲನ್ ಅಭಿಮಾನಿಗಳಿಗೆ ಟಿಕೆಟ್ ದರ ಏರಿಕೆ ಬಿಸಿ
ಸುದ್ದಿದಿನ ಡೆಸ್ಕ್ : ದೊಡ್ಡ ಬಜೆಟ್ ನಲ್ಲಿ ನಿರ್ಮಿಸಿರುವ ಸ್ಯಾಂಡಲ್ ವುಡ್ ನ ಚಿತ್ರ ‘ದಿ ವಿಲನ್’ ಪ್ರದರ್ಶನದ ಹಕ್ಕು ಪಡೆದಿರುವ ಕೆಲ ಮಲ್ಟಿಪ್ಲೆಕ್ಸ್ ಗಳು ಟಿಕೆಟ್ ದರ ಏರಿಸಿ ಚಿತ್ರರಸಿಕರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿವೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ಟೀಕೆಗಳ ಸುರಿಮಳೆ ಹರಿಯುತ್ತಿದೆ.
‘ದಿ ವಿಲನ್ ಚಿತ್ರದ ಟಿಕೆಟ್ ಗಾಗಿ ಈಗಾಗಲೇ ಬುಕಿಂಗ್ ಶುರುವಾಗಿದ್ದು, ದೊಡ್ಡ ಬಜೆಟ್‌ನ ಚಿತ್ರ ಎಂದು ಲಾಭ ಪಡೆದುಕೊಳ್ಳಲು ಮುಂದಾಗಿರುವ ಮಲ್ಟಿಪ್ಲೆಕ್ಸ್ ಗಳು ನಾಲ್ಕು ದಿನಗಳ ಮಟ್ಟಿಗೆ ಟಿಕೆಟ್ ದರ ಹೆಚ್ಚಿಸಲಾಗಿದೆ. ಇದಕ್ಕೆ ಕನ್ನಡ ಚಿತ್ರ ರಸಿಕರು ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಪ್ರಕಟಣೆ ಬರೆದು ನೇತುಹಾಕಿವೆ.
ದಸರಾ ರಜಾದಿನಗಳಲ್ಲಿ ದೊಡ್ಡ ಚಿತ್ರವೊಂದನ್ನು ಬಿಡುಗಡೆ ಕಾಣುತ್ತಿದ್ದು, ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಟಿಕೆಟ್ ಸೋಲ್ಡ್ ಆಗಲಿವೆ. ದೇಶಾದ್ಯಂತ ಚಿತ್ರ ತೆರೆ ಕಾಣುತ್ತಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿನ ಚಿತ್ರಮಂದಿರಗಳ ಟಿಕೆಟ್ ಬುಕಿಂಗ್ ಕ್ಲೋಸ್ ಆಗಿವೆ ಎಂದು ಟ್ವಿಟರ್ ನಲ್ಲಿ ಪೋಸ್ಟ್ ಹರಿದಾಡುತ್ತಿವೆ.