ಸಿನಿ ಸುದ್ದಿ
‘ದಿ ವಿಲನ್’ ಟೀಸರ್ ರಲೀಸ್ ಗೆ ಡೇಟ್ ಫಿಕ್ಸ್ : ಟೀಸರ್ ನೋಡಲು ಟಿಕೆಟ್..!
ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ಬಹುನೀರಿಕ್ಷಿತ ಚಿತ್ರ ‘ದಿ ವಿಲನ್’ ಚಿತ್ರದ ಟೀಸರ್ ಗೆ ಮುಹೂರ್ತ ಕೊನೆಗೂ ಫಿಕ್ಸ್ ಆಗಿದೆ.
ಇದೇ ತಿಂಗಳ 28 ರಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಟೀಸರ್ ಲಾಂಚ್ ಮಾಡಲಿದ್ದಾರೆ. ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಟೀಸರ್ ರಿಲೀಸ್ ಮಾಡಲಿದ್ದು, ಒಟ್ಟು 5 ಸ್ಕ್ರೀನ್ ನಲ್ಲಿ ಟೀಸರ್ ನೋಡಲು ಟಿಕೆಟ್ ಮಾರಾಟಲಾಗುತ್ತಿದೆ.
ಟಿಕೆಟ್ ಮಾರಾಟ
ಒಂದು ಟಿಕೆಟ್ ಬೆಲೆ 5೦೦ ರೂ ಇದ್ದು, ಟಿಕೆಟ್ ಮಾರಾಟ ದಿಂದ ಬಂದ ಹಣವನ್ನು ಸಂಕಷ್ಟದಲ್ಲಿರುವ ಸ್ಯಾಂಡಲ್ ವುಡ್ ನಿರ್ದೇಶಕರಿಗೆ ಕೊಡಲು ‘ದಿವಿಲನ್’ ಟೀಂ ನಿರ್ಧಾರಮಾಡಿರುವುದಾಗಿ ತಿಳಿಸಿದೆ.
ಕರುನಾಡ ಚಕ್ರವರ್ತಿ,ಶಿವರಾಜ್ ಕುಮಾರ್. ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ’ ‘ದಿ ವಿಲನ್ ‘ ಬಿಗ್ ಬಜೆಟ್ ನಲ್ಲಿ ತಯಾರಾಗಿದ್ದು,
ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ.