ದಿನದ ಸುದ್ದಿ
ಭಾರತದ ಯುವಕರತ್ತ ಇಡೀ ವಿಶ್ವದ ಚಿತ್ತ : ಪ್ರಧಾನಮಂತ್ರಿ ನರೇಂದ್ರ ಮೋದಿ
ಸುದ್ದಿದಿನ ಡೆಸ್ಕ್ : ಭಾರತದ ಯುವಕರನ್ನು ಇಡೀ ವಿಶ್ವ ಭರವಸೆಯ ಕಣ್ಣುಗಳಿಂದ ಎದುರು ನೋಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ( Prime minister Narendra modi) ಹೇಳಿದ್ದಾರೆ.
ದೇಶದ ಯುವಕರು ಬೆಳವಣಿಗೆಯ ಇಂಜಿನ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತ, ವಿಶ್ವದ ಇಂಜಿನ್ ಕೂಡ ಎಂದು ಅವರು ತಿಳಿಸಿದ್ದಾರೆ.
ತಮಿಳುನಾಡಿನ ಚೆನ್ನೈ ( Chennai ) ನಲ್ಲಿ ಆಯೋಜಿಸಿದ್ದ ಅಣ್ಣಾ ವಿಶ್ವವಿದ್ಯಾಲಯದ 42ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವಜನರ ಬಗ್ಗೆ ಸ್ವಾಮಿ ವಿವೇಕಾನಂದ ಅವರು ಆಡಿದ್ದ ಮಾತುಗಳನ್ನು ಇದೇ ಸಂದರ್ಭದಲ್ಲಿ ಮೆಲುಕು ಹಾಕಿದರು.
ಅಣ್ಣಾ ವಿಶ್ವವಿದ್ಯಾಲಯ ಮತ್ತು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಒಡನಾಟವನ್ನೂ ಪ್ರಧಾನಮಂತ್ರಿಗಳು ಇದೇ ಸಂದರ್ಭದಲ್ಲಿ ಸ್ಮರಿಸಿದ್ದಾರೆ.
ಕೋವಿಡ್-19 ಸೋಂಕು ಯಾರೂ ಊಹಿಸಲಾಗದಂತಹ ಘಟನೆ, ಶತಮಾನಕ್ಕೆ ಒಮ್ಮೆ ಎದುರಾಗಬಹುದಾದ ಸಾಂಕ್ರಾಮಿಕ ರೋಗ ಈ ಬಾರಿ ಕೋವಿಡ್ ಸೋಂಕಿನ ರೂಪದಲ್ಲಿ ಕಾಣಿಸಿಕೊಂಡಿದೆ. ಇದನ್ನು ಎದುರಿಸಲು ದೇಶ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ವಿಶೇಷವಾಗಿ ವಿಜ್ಞಾನಿಗಳು, ಆರೋಗ್ಯ ಕ್ಷೇತ್ರದ ವೃತ್ತಿಪರರು, ಸಾಮಾನ್ಯ ಜನರನ್ನು ಮುಕ್ತ ಕಂಠದಿಂದ ಶ್ಲಾಘಿಸುವುದಾಗಿ ಅವರು ಹೇಳಿದರು. ಕೋವಿಡ್ ಸೋಂಕು ನಂತರ ದೇಶದ ಪ್ರತಿಯೊಂದು ವಲಯವೂ ಕೂಡ ಹೊಸದಾಗಿ ಆರಂಭವಾಗುವಂತಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಎಸ್.ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಕಳೆದ ಹಣಕಾಸು ವರ್ಷದಲ್ಲಿ ದಾಖಲೆಯ ಮೊತ್ತದ 83 ಶತಕೋಟಿ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ ದೇಶಕ್ಕೆ ಹರಿದುಬಂದಿದೆ. ಇದೇ ವೇಳೆ ದೇಶದಲ್ಲಿ ನವೋದ್ಯಮಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ತಲೆ ಎತ್ತಿವೆ, ಬಲಿಷ್ಠ ಸರ್ಕಾರ ಎಲ್ಲವನ್ನೂ ಮತ್ತು ಎಲ್ಲರನ್ನು ನಿಯಂತ್ರಿಸುತ್ತಿದೆ ಎಂದು ಹೇಳಿದರು.
ಇಂಟರ್ ನ್ಯಾಷನಲ್ ಬುಲಿಯನ್ ಎಕ್ಸ್‌ಚೇಂಜ್‌ಗೆ ಚಾಲನೆ
ಗುಜರಾತ್‌ನ ಗಾಂಧಿನಗರದಲ್ಲಿಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಮೊಟ್ಟ ಮೊದಲ ಇಂಟರ್ ನ್ಯಾಷನಲ್ ಬುಲಿಯನ್ ಎಕ್ಸ್‌ಚೇಂಜ್‌ಗೆ ಚಾಲನೆ ನೀಡಿದರು. ಇದೇ ವೇಳೆ ಎನ್‌ಎಸ್‌ಸಿ-ಐಎಫ್‌ಎಸ್‌ಸಿ-ಎಸ್‌ಜಿಎಕ್ಸ್‌ಗೂ ಕೂಡ ಚಾಲನೆ ನೀಡಿದರು.
ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರದ ಕೇಂದ್ರ ಕಚೇರಿಗೆ ಗಿಫ್ಟ್ ಸಿಟಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಹೊಸ ಅವಕಾಶ ಸೃಷ್ಟಿ ಮಾಡುವ ಜತೆಗೆ ಹಣಕಾಸು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮನ್ವಂತರ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಅಮೆರಿಕ, ಇಂಗ್ಲೆಂಡ್, ಸಿಂಗಾಪುರ ಸೇರಿದಂತೆ ಅನೇಕ ಜಾಗತಿಕ ಹಣಕಾಸು ಸಂಸ್ಥೆಗಳನ್ನು ಬೆಸೆಯಲು ಕೂಡ ಸಹಕಾರಿಯಾಗಲಿವೆ ಎಂದು ಹೇಳಿದ್ದಾರೆ.
GIFT City is an integrated financial and technology services hub for India and the world. https://t.co/I5arK3N000
— Narendra Modi (@narendramodi) July 29, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243