ಲೈಫ್ ಸ್ಟೈಲ್

ವಿಡಿಯೋ | ಕನ್ನಡದ ಅತ್ಯಂತ ಕಿರಿಯ ‘ಕನ್ನಡ ರಾಪ್ ಗಾಯಕಿ’ಯ ಪರಿಸರ ಪ್ರೇಮ‌..!

Published

on

ಎಂಟರ ಹರೆಯದ ಬೆಂಗಳೂರಿನ ಈ ಹುಡುಗಿ ಸದ್ಯ ಸುದ್ದಿ ಯಲ್ಲಿದ್ದಾಳೆ. ಕಾರಣ ಇಷ್ಟೇ, ಮಾರ್ಚಿ ತಿಂಗಳ 22 ನೇ ತಾರೀಖು “ವಿಶ್ವ ಜಲ ದಿನವನ್ನ” ಆಚರಿಸಲಾಗುತ್ತದೆ . ವಿಶ್ವದಾದ್ಯಂತ ಪ್ರತಿ ಒಬ್ಬರೂ ತಮ್ಮದೇ ರೀತಿಯಲ್ಲಿ “ನೀರನ್ನು ಉಳಿಸಿ” ಆಂದೋಲನಕ್ಕೆ ಸಾಥ್ ನೀಡಿದರು. ಆದರೆ ಬೆಂಗಳೂರಿನ ವಿಬ್ಗಯಾರ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವ ಮಾನ್ಯ ಹರ್ಷಾ , ತನ್ನದೇ ಆದ ವಿಶಿಷ್ಟ”ಕನ್ನಡ ರಾಪ್ ಸಾಂಗ್ ” ಮೂಲಕ “ನೀರು ಉಳಿಸಿ, ಪರಿಸರ ಬೆಳಸಿ” ಎಂಬ ಮೆಸೇಜ್ ಮನುಕುಲದ ಮನಮುಟ್ಟುವಂತೆ ನೀಡಿದ್ದಾಳೆ.

ಮಾನ್ಯ ಕನ್ನಡ ದಲ್ಲಿ ಹಲವಾರು ರಾಪ್ ಗೀತೆ ರಚಿಸಿದ್ದು, ಈ ಪುಟ್ಟ ಬಾಲಕಿಯ ರಾಪ್ ಸಾಂಗ್ ಗೆ ಕನ್ನದ ರಾಪರ್ ಚಂದನ್ ಶೆಟ್ಟಿ ಅವರೂ ಫುಲ್ ಖುಷ್ ಆಗಿ ಅವರ ಸಾಮಾಜಿಕ ಖಾತೆ ಒಂದರಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹುಡುಗಿಯ ಅಧ್ಬುತ ಪ್ರತಿಭೆ ಗೆ ಎಲ್ಲರೂ ಫುಲ್ ಫಿದಾ ಆಗಿದ್ದು, “‌‌‌ಲೆಟ್ಸ್ ಸೇವ್ ವಾಟರ್” ರಾಪ್ ಸಾಂಗ್ ಫುಲ್ ವೈರಲ್ ಆಗಿದೆ. ಎಂಟನೇ ವಯಸ್ಸಿಗೇ ಪ್ರಕೃತಿ ಪ್ರೇಮ ಮೆರದಿರುವ ಈ ಪೋರಿಯ “ನೀರು ಉಳಿಸಿ, ಪರಿಸರ  ಬೆಳಸಿ” ಆಂದೋಲನಕ್ಕೆ ಬನ್ನಿ ನಾವೂ ಕೈ ಜೋಡಿಸೋಣ.

ಇಷ್ಟೇ ಅಲ್ಲದೆ, ಕಳೆದ ವರ್ಷ ಮಾರ್ಚ್ 2018 ರಲ್ಲಿ ನಡೆದ ವಿಶ್ವ ಜಲ ದಿನಾಚರಣೆ ಗೆ ಮಾನ್ಯ ತನ್ನ ಸ್ನೇಹಿತರೊಡಗೂಡಿ ನೀರು ಉಳಿಸಿ ವಾಕಥಾನ್ ಹಮ್ಮಿಕೊಂಡಿದ್ದು, ನೂರು ಮಕ್ಕಳು ಸೇರಿದಂತೆ ಮೂವತ್ತಕ್ಕೂ ಹೆಚ್ಚು ತಾಯಂದಿರು ಸಾಥ್ ನೀಡಿದರು. ಬೆಂಗಳೂರಿನ ಪುಟ್ಟೇನಹಳ್ಳಿ ಕೆರೆ ಯಿಂದ ದೊರೇಸಾನಿಪಾಳ್ಯದ ವರೆಗೂ ವಾಕಥಾನ್ ಮಾಡಿ, ಪುಟ್ಟೇನಹಳ್ಳಿ ಯಲ್ಲಿ ಗಿಡ ನೆಡುವುದರೊಂದಿಗೆ ವಾಕಥಾನ್ ಮುಕ್ತಾಯವಾಗಿತ್ತು. ಸದಾ ಕಾಲ ಆಟ-ಪಾಠ-ತುಂತಾಟದಲ್ಲಿ ಮಗ್ನವಾಗಿರುವ ಯುವಪೀಳಿಗೆ ಸಾಮಾಜಿಕ ಕಳಕಳಿ ಹೊಂದಿರುವುದು ಹೆಮ್ಮೆಯ ಸಂಗತಿ ಆಗಿದೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://sharechat.com/post/5lkaeNK

https://sharechat.com/post/BJ60ldN

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version