ದಿನದ ಸುದ್ದಿ

ವಚನ ಸಾಹಿತ್ಯದಲ್ಲಿ ಬಹಳಷ್ಟು ಮಾನವೀಯ ಮೌಲ್ಯಗಳಿವೆ : ಪೂಜ್ಯ ಶ್ರೀ ಬಸವ ಪ್ರಭು ಸ್ವಾಮಿಜೀ

Published

on

ಸುದ್ದಿದಿನ, ದಾವಣಗೆರೆ : ಸಾಹಿತ್ಯದಲ್ಲಿ ಮುಖ್ಯ ಮತ್ತು ಅಪರೂಪದ ಅಭಿವ್ಯಕ್ತಿಯೆಂದರೆ ವಚನ ಸಾಹಿತ್ಯ. ಅದು ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜವನ್ನು ನಂಬಿದ ಬಹಳ ದೊಡ್ಡ ಮಾನವೀಯ ಮೌಲ್ಯಗಳು ಇದರಲ್ಲಿ ಅಡಗಿವೆ ಎಂದು ಪರಮ ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಜಿಗಳು ದಾವಣಗೆರೆ ಇವರು ಆದ್ಯರ ವಚನ ಪರುಷ ಕಂಡಯ್ಯ ಎಂಬ ವಿನೂತನ ವಿಶಿಷ್ಟ ಕಾರಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕೆಂಭಾವಿಯ ಷ.ಬ್ರಚನ್ನಬಸವ ಶಿವಾಚರರು ಸಮುಖವಹಿಸಿ, ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು. ಬಂಡಾಯ ಸಾಹಿತ್ಯಕ್ಕಿಂತ ಮೊದಲು ಕನ್ನಡ ನಾಡಿನಲ್ಲಿ ವಚನ ಒಂದು ಚಳವಳಿಯ ಮುಖವಾಣಿಯಾಗಿತ್ತೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಕೆಂಭಾವಿಯ ಶಿಕ್ಷಕ, ಸಾಹಿತಿ ಶರಣಬಸಯ್ಯ ಹಿರೇಮಠ ಅವರು ವಚನ ಸಾಹಿತ್ಯದ ಪರಂಪರೆ ಹೇಳುತ್ತಾ, ಕಲ್ಯಾಣ ಕ್ರಾಂತಿಯ ನಂತರ 13, 14ನೇ ಶತಮಾನದಲ್ಲಿ ವಚನ ಸಾಹಿತ್ಯ ಸಪ್ತ – ಗುಪ್ತವಾಗಿದ್ದಿತು. ಇದಕ್ಕೆ ಹಲವಾರು ಕಾರಣಗಳಿವೆ. 15 ಶತಮಾನದಲ್ಲಿ ಯಡಿಯೂರ ಸಿದ್ದಲಿಂಗ ಯತಿಗಳು ನೇತೃತ್ವದಲ್ಲಿ ವಚನ ಸಾಹಿತ್ಯಕ್ಕೆ ಪುನರುಜ್ಜಿವನ ಆಯ್ತು. ಇದೇ ಇದೇ ಸಂದರ್ಭದಲ್ಲಿ 12 ನೇ ಶತಮಾನದ ವಚನಗಳನ್ನು ನೂರೋಂದು ವಿರಕ್ತರು ಸ್ಥಲಕಟ್ಟುಗಳ ಆಧಾರದ ಮೇಲೆ ಸಂಕಲನ ಮಾಡಿದರು. ಮತ್ತೆ 16 ನೇ ಶತಮಾನ ಸಾಹಿತ್ಯಕ್ಕೆ ಹಿನ್ನಡೆಯಾಗಿದ್ದು 17 ನೇ ಶತಮಾನದಲ್ಲಿ ಜೇವರಗಿಯ ಷಣ್ಮುಖ ಶಿವಯೋಗಿಗಳು ಈ ಪರಂಪರೆಯನ್ನು ಮುಂದುರೆಸುತ್ತಾರೆ.

ಅದೇ ರೀತಿ ಆಧುನಿಕ ವಚನಗಳನ್ನು ಸಂಕಲನ ಮಾಡಿ ಸ್ಥಲಕಟ್ಟು ಆಧಾರವಾಗಿ ವಿಂಗಡಿಸಿ ಸಂಗ್ರಹಿಸಬೇಕಾಗಿದೆ. ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿ ದೇಸಿಯ ಸೊಗಡಿನಿಂದ ಕೂಡಿವೆ. ಆಧುನಿಕ ವಚನಗಳನ್ನು ನೋಡಿದಾಗ ಅದರ ಸಾಮಾಜಿಕ ವ್ಯಾಪಕತೆ ಅಪಾರವಾದುದೆಂಬುದು ಅರಿವಿಗೆ ಬರುತ್ತದೆ. ಆಧುನಿಕ ವಚನಗಳಲ್ಲಿ ಅದ್ಭುತ ವಚನಗಳಿವೆ. ಅವುಗಳೆಲ್ಲ ಪ್ರಸಾರ, ಪ್ರಚಾರ ಆಗಬೇಕು ಎಂದು ಹೇಳಿದರು.

ವೇದಿಕೆಯ ಮೇಲೆ ಆನ್ ಲೈನ್ ಅನುಭವ ಮಂಟಪದ ರೂವಾರಿಗಳಾದ ಪುಟ್ಟರಾಜಸೇವಾ ಸಮಿತಿ ಹಾಗೂ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷರೂ ಆದ ಶ್ರೀ ಪಂ. ಚನ್ನವೀರ ಸ್ವಾಮಿಗಳು ಹಿರೇಮಠ, ಕಡಣಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಂದು ಆದ್ಯರ ವಚನ ಮತ್ತು ಇನ್ನೊಂದು ಸ್ವರಚಿತ ವಚನ ಮಾಡಲು ಅವಕಾಶ ಇತ್ತು. ಪ್ರಾರ್ಥನೆಯನ್ನು ಶ್ರೀಮತಿ ಸರೋಜಿನಿ ನಡೆಸಿ ಕೊಟ್ಟರು. ಶ್ರೀಮತಿ ಸುಮಾ ಹಡಪದ ಸ್ವಾಗತ ಮಾಡಿದರು ಪ್ರಾಸ್ಥಾವಿಕವಾಗಿ ಶ್ರೀಮತಿ ಆಶಾ ಯಮನಕಮರಡಿ ಮಾತನಾಡಿದರು. ವಂದನಾರ್ಪಣೆಯನ್ನು ಶ್ರೀಮತಿ ಎಂ.ಜಿ.ಶಶಿಕಲಾ ಮೂರ್ತಿ ನೆರವೆರಿಸಿದರು. ಶ್ರೀಮತಿ ಸುನಿತಾ ನಂದೆಣ್ಣನವರ ನಿರೂಪಣೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version