ದಿನದ ಸುದ್ದಿ
ನಾಳೆ ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
ಸುದ್ದಿದಿನ,ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲಾವನ್ನು ಕೂಡಲೇ ಮನ್ನಾ ಮಾಡದಿದ್ದರೆ ಸೋಮವಾರ(ಮೇ28) ಬಂದ್ ಆಚರಿಸುವುದಾಗಿ ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸ್ವತಃ ಬಿಜೆಪಿ ಪಕ್ಷದಲ್ಲಿಯೇ ಗೊಂದಲ ಮೂಡಿಸಿದ್ದು. ಆದರೆ, ಲಾರಿ ಮತ್ತು ಆಟೋ ಮಾಲೀಕರ ಸಂಘಗಳು ಬಂದ್ ಗೆ ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವ ಸಂಪುಟ ರಚನೆಯಾದ ಮೇಲೆ ಸಾಲಾಮನ್ನಾ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ನವರು ಪಕ್ಷದಲ್ಲಿ ಚರ್ಚೆ ನಡೆಸದೆ ಅನೌಪಚಾರಿಕವಾಗಿ ಶಾಸಕಾಂಗ ಸಭೆಯಲ್ಲಿ ಶುಕ್ರವಾರ (ಮೇ25)
ಸೋಮವಾರ (ಮೇ28) ಕರ್ನಾಟಕ ಬಂದ್ ಮಾಡುವುದಾಗಿ ಘೋಷಣೆಮಾಡಿದ್ದರು.
ಆ ಸಮಯದಲ್ಲಿ ಕುಮಾರಸ್ವಾಮಿ ಸರ್ಕಾರಕ್ಕೆ ಇನ್ನೂಂದಿಷ್ಟು ಸಮಯ ಕಾಲಾವಾಕಾಶ ಕೊಡಬೇಕು ಎಂದು ಅಭಿಪ್ರಾಯವೂ ವ್ಯಕ್ತವಾಗಿತ್ತು. ಆದರೂ ಯಡಿಯೂರಪ್ಪ ನವರು ತರಾತುರಿಯಲ್ಲಿ ಕರ್ನಾಟಕ ಬಂದ್ ಮಾಡುವುದಾಗಿ ಘೋಷಿಸಿದರು ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಆದರೆ ಶನಿವಾರ (ಮೇ26) ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಪಕ್ಷವು ಬಂದ್ ಗೆ ಕರೆ ಕೊಟ್ಟಿದೆ ಎನ್ನುವುದಕ್ಕಿಂತ ರಾಜ್ಯದ ರೈತರೇ ಸ್ವಯಂಪ್ರೇರಿತವಾಗಿ ಬಂದ್ ಅನ್ನು ಆಚರಿಸಲಿದ್ದಾರೆ ಎಂಬ ಹೇಳಿದ್ದರು.ಆದರೆ ರಾಜ್ಯದ ಯಾವುದೇ ರೈತ ಸಂಘಟನೆಗಳು ಇದುವರೆಗೆ ಬಂದ್ ಆಚರಿಸುವುದಾಗಿ ಹೇಳಿಕೆ ನೀಡಿರುವುದಿಲ್ಲ.
ಆದ್ದರಿಂದ ಸೋಮವಾರ ಬಂದ್ ನಡೆಯುವುದು ಅನುಮಾನ ಎಂಬ ಆಭಿಪ್ರಾಯವ್ಯಕ್ತವಾಗಿದೆ. ಬಂದ್ ಗೆ ಯಡಿಯೂರಪ್ಪ ಶುಕ್ರವಾರ ಘೋಷಿಸಿದ ಬೆನ್ನಲ್ಲೇ ಬೆಂಗಳೂರು ಹೊರತುಪಡಿಸಿ ರಾಜ್ಯದ ಇನ್ನಿತರ ಎಲ್ಲಾ ಜಿಲ್ಲೆಗಳ ಪಕ್ಷದ ಘಟಕಗಳಿಗೆ ಸಂದೇಶವನ್ನು ರವಾನಿಸಲಾಗಿದೆಯಾದರೂ, ಯಾವ ಯಾವ ಸಂಘಟನೆಗಳ ಜತೆಗೆ ಬಂದ್ ಆಚರಿಸಬೇಕೆಂಬ ಬಗ್ಗೆ ವಿವರಗಳಿಲ್ಲ ಎಂದು ತಿಳಿದು ಬಂದಿದೆ.