ದಿನದ ಸುದ್ದಿ

ಮನೆ ಬೀಗ ಮುರಿದು ಹಣ ದೋಚಿದ ಕಳ್ಳರು

Published

on

ಸುದ್ದಿದಿನ, ಮಂಡ್ಯ : ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಸಂಪತ್ ಅವರ ಮನೆಯಲ್ಲಿ ಕಳ್ಳತನವಾಗಿದೆ.

ಘಟನೆ

ಒಂದು ವಾರದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ತಂಗಿದ್ದ ಕುಟುಂಬದವರು ನಿನ್ನೆ ರಾತ್ರಿ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಪರೇಷನ್ ಖರ್ಚಿಗೆ ಅಂತ ಬ್ಯಾಂಕ್ ನಿಂದ 60ಸಾವಿರ ರೂಪಾಯಿ ಹಣವನ್ನು ತಂದು ಮನೆಯ ಬೀರುವಿನಲ್ಲಿ ಇಟ್ಟಿದ್ದರು ಬೆಳಿಗ್ಗೆ ಬೆಂಗಳೂರಿನಿಂದ ಬಂದು ನೋಡಿದಾಗ ಬಾಗಿಲ ಚಿಲಕವನ್ನು ಬ್ಲೇಡ್ ನಿಂದ ಕತ್ತರಿಸಿ ಒಳಗೆ ಹೋಗಿ ಬೀರಿನ ಬಾಗಿಲನ್ನು ಮೀಟಿ ಬಟ್ಟೆಗಳನ್ನೆಲ್ಲಾ ಬಿಸಾಡಿ ಹಣವನ್ನ ದೊಚಿರುವುದು ಕಂಡುಬಂದಿದೆ.

ಸ್ಥಳಕ್ಕೆ ಮದ್ದೂರು ಪೊಲೀಸ್ ಠಾಣಾ ಸಿಬ್ಬಂದಿ ಅವರು ಸ್ಥಳ ಪರಿಶೀಲನೆ ಮಾಡಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಹಾಗೇ ನಿನ್ನೆ ದಿನ ಕೊಳ್ಳೇಗಾಲದ ಮಾಟ ಮಂತ್ರದ ಐವರು ಮನೆಯ ಸುತ್ತಮುತ್ತ ಓಡಾಡಿರುವುದು ಕಂಡು ಬಂದಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version