ಲೈಫ್ ಸ್ಟೈಲ್
ಇದು ಪರಿಸರ ಸ್ನೇಹಿ ಪಟಾಕಿ..!
ಸುದ್ದಿದಿನ ಡೆಸ್ಕ್ : ಇಡೀ ವಿಶ್ವದಾದ್ಯಂತ ಭಾರತೀಯರ ದೀಪಾವಳಿ ಹಬ್ಬದ ತಯಾರಿ ಜೋರಾಗಿಯೇ ಸಾಗಿದೆ. ಮೂರು ದಿನಗಳ ಬೆಳಕಿನ ಸಂಭ್ರಮಕ್ಕೆ ಸಾಕ್ಷಿ ಆಗಲಿದೆ ಭೂಮಿ. ಭಾರತೀಯ ಸಂಸ್ಕೃತಿ ಯಲ್ಲಿ ಬಹಳ ವಿಶೇಷ ಅನಿಸಿಕೊಂಡಿರುವ ಈ ಹಬ್ಬ ಜೀವನದ ಕತ್ತಲು-ಬೆಳಕಿನಾಟಕ್ಕೆ ಸಾಕ್ಷಿಯಾಗಲಿದೆ.
ದೀಪಾವಳಿ ಹಬ್ಬದಲ್ಲಿ ನಡೆಯುವ ಲಕ್ಷ್ಮಿ ಪೂಜೆ, ಹಣತೆಯ ಆರಾಧನೆ, ಸ್ವಾದಿಷ್ಟ ಭೋಜನ, ಹೊಸ ಬಟ್ಟೆ ಯ ಸಡಗರ, ಪಟಾಕಿ ಯ ಅಬ್ಬರ.. ಪಟಾಕಿ ಎಂದೊಡನೆ ತಟ್ಟನೆ ನೆನಪಾಗೋದು ಬಿಜಲೀ, ಲಕ್ಷ್ಮಿ ಬಾಂಬ್, ಹೈಡ್ರೋಜನ್ ಬಾಂಬ್! ಸುರಸುರ ಬತ್ತಿ, ರಾಕೆಟ್… ಅರರೆ.. ಸುಮ್ಮನೆ ಯಾಕೆ ನೆನಪಿಸಿ ಹೊಟ್ಟೆ ಉರಿಸುತ್ತೀರಾ.. ಈ ಬಾರಿಯ ಸುಪ್ರೀಂಕೋರ್ಟ್ ಆದೇಶ ದ ಮೇರೆಗೆ ಪಟಾಕಿ ಹೊಡೆಯದೆ ಹಾಗಿಲ್ಲ ಅಂತ ಬೇಸರಗೊಂಡಿರುವವರಿಗೆ, ಇದೋ ಸಿಹಿ ಸುದ್ದಿ.
ನಿಮ್ಮ ಮನಸೋತಿದ್ದ ಇಚ್ಛೆ, ನಿಮ್ಮ ಫೇವರಿಟ್ ಪಟಾಕಿ ಯನ್ನು ನೀವು ಸಿಡಿಸಬಹುದು… ಆದರೆ… ಕಿವಿಯಲ್ಲಿ ಪುಟ್ಟ ರೊಂದು ಟ್ವಿಸ್ಟ್… ಈ ಪಟಾಕಿ ನಿಮ್ಮ ಬಾಯಲ್ಲಿ ಸಿಡಿಯುತ್ತದಷ್ಟೇ..
ಈ ಬಾರಿಯ ದೀಪಾವಳಿಯ ವಿಶೇಷ ಎಂದರೇ … #DiwaliCrackersChocolate ಪಟಾಕಿ ಯ ಚಾಕಲೇಟ್.. ನೋಡೋಕೆ ಅಚ್ಚು ಪಟಾಕಿ ಅಂತೆಯೇ ಕಾಣುವ ಈ ಚಾಕಲೇಟ್ ಗಳ ಬೇಡಿಕೆ ಹೆಚ್ಚಿದೆ.
ದೀಪಾವಳಿ ಸಂದರ್ಭದಲ್ಲಿ ಸ್ನೇಹಿತರು-ಸಂಬಂಧಿಕರಲ್ಲಿ ಸಿಹಿ ಹಂಚುವುದು ಸಾಮಾನ್ಯ. ಈಗಿನ ಆಧುನಿಕತೆಯ ಅಬ್ಬರದಲ್ಲಿ ಗಿಫ್ಟ್ ಗಳ ಕಾರುಬಾರು ಬಲು ಜೋರು.. ಈಗಂತೂ ಬಹಳ ಡಿಫರೆಂಟ್ ಆದ ದೀಪಾವಳಿ ಗಿಫ್ಟ್ ಮತ್ತು ಸ್ವೀಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಹಾಗಾದ್ರೆ ಈ ಬಾರಿಯ ದೀಪಾವಳಿ ಗೆ ನಿಮ್ಮ ಫ್ರೆಂಡ್ಸ್ ಮತ್ತು ಕುಟುಂಬಸ್ಥರೊಂದಿಗೆ ಈ ವಿಶೇಷ #Diwalicrackerschocolate ಪಟಾಕಿ ಚಾಕಲೇಟ್ ಸವಿಯುತ್ತಾ ದೀಪಗಳ ಹಬ್ಬವನ್ನ ಸಂಭ್ರಮದಿಂದ ಆಚರಿಸಿ. ಪರಿಸರ ಸ್ನೇಹಿ ದೀಪಾವಳಿ ನಿಮ್ಮ ದಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401