ದಿನದ ಸುದ್ದಿ
ಜುಲೈ 27 | ಕಡು ಕೆಂಪು ಬಣ್ಣದಲ್ಲಿ ಚಂದಿರ ..!
This is the closest Mars will get to Earth at least until 2035, 18 years away
ಸುದ್ದಿದಿನ ಡೆಸ್ಕ್ : ಖಗೋಳದಲ್ಲಿ ಅಪರೂಪದ ಕೌತುಕವೊಂದು ಜರುಗಲಿದ್ದು, ಜುಲೈ 27ರಂದು ಚಂದ್ರ ಕಡು ಕೆಂಪು ಬಣ್ಣದಲ್ಲಿ ಘೋಚರಿಸಲಿದ್ದಾನೆ. 2018ರ ಜನವರಿ ನಂತರ ಮತ್ತೊಂದು ಬಾರಿ ವಿಸ್ಮಯ ಸಂಭವಿಸಲಿದೆ. ಇದೇ ವೇಳೆ ಮಂಗಳನು 15 ವರ್ಷಗಳ ನಂತರ ಭೂಮಿಗೆ ಹತ್ತಿರಕ್ಕೆ ಬರಲಿದ್ದಾನೆ ಇದು ಶತಮಾನದ ಅತಿ ದೊಡ್ಡ ಚಂದ್ರ ಗ್ರಹಣ ಎನ್ನಲಾಗಿದೆ.
ಭಾರತದಲ್ಲಿ ಜುಲೈ 27 ಮತ್ತು 28ರ ಮಧ್ಯರಾತ್ರಿ ಒಂದು ತಾಸು 43 ನಿಮಿಷಗಳ ಕಾಲ ಸಂಪೂರ್ಣ ಚಂದ್ರ ಗ್ರಹಣ ಹಿಡಿಯಲಿದ್ದಾನೆ. ಜೂನ್ 28ರಂದು 1.52ರಿಂದ 2.43ರ ತನಕ ಭಾರತದಲ್ಲಿ ಸಂಪೂರ್ಣವಾಗಿ ಚಂದ್ರ ಗ್ರಹಣ ನೋಡಬಹುದಾಗಿದೆ. ಅಲ್ಲದೇ, 3 ಗಂಟೆ 55 ನಿಮಿಷಗಳವರೆಗೆ ಅಂದರೆ ರಾತ್ರಿ 10.44ರಿಂದ ಬೆಳಗ್ಗೆ 4.58ರ ವರೆಗೆ ಭಾಗಶಃ ಗ್ರಹಣ ಹಿಡಿಯಲಿದೆ ಎಂಬುದು ಖಗೋಳ ವಿಜ್ಞಾನಿಗಳ ಅಭಿಪ್ರಾಯ.
ಎಲ್ಲೆಲ್ಲಿ ಕಾಣಲಿದ್ದಾನೆ ಚಂದ್ರ
ಯುರೋಪ್, ಆಫ್ರಿಕಾ, ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಪೂರ್ವ ಗೋಳಾರ್ಧದಲ್ಲಿ ಮಾತ್ರ ಚಂದ್ರ ಕೊಡಲಿದ್ದಾನೆ. ಆದರೆ, ಅಮೆರಿಕಾದಲ್ಲಿ ಅಪರೂಪದ ವಿಸ್ಮಯ ವೀಕ್ಷಣೆ ಸಾಧ್ಯವಿಲ್ಲ.
ಜನವರಿಯಲ್ಲಿ ಸಂಭವಿಸಿದ ಸೂಪರ್ ಬ್ಲಡ್ ಮೂನ್ ಗಿಂತ 40 ನಿಮಿಷ ಹೆಚ್ಚು ಕಾಲ ಘೋಚರಿಸಲಿದೆ. ಜನವರಿಯಲ್ಲಿ ಒಂದೇ ಕಾಲದಲ್ಲಿ ಮೂರು (ಸೂಪರ್ ಮೂನ್, ಚಂದ್ರ ಗ್ರಹಣ, ಬ್ಲೂನ್ ಮೂನ್) ವಿಸ್ಮಯಗಳು ಸಂಭವಿಸಿದ್ದವು. ಇದರಂತೆ ಜುಲೈನಲ್ಲಿ ಮತ್ತೊಂದು ಅಪರೂಪದ ಘಟನೆ ಸಾಕ್ಷಿಯಾಗಲಿದ್ದು, ಮಂಗಳ ಭೂಮಿಗೆ ಅತೀ ಹತ್ತಿರಕ್ಕೆ ಬಂದು ದೊಡ್ಡದಾಗಿ, ಪ್ರಕಾಶನಮಾನವಾಗಿ ಘೋಚರಿಸಲಿದ್ದಾನೆ. ಜುಲೈ 30ರಂದು ಭೂಮಿ- ಚಂದ್ರನ ನಡುವಿನ ಅಂತರ 57.58 ವಿಲಿಯನ್ ಕಿ.ಮೀ. ಇರಲಿದೆ. ಭೂಮಿ- ಮಂಗಳನ ನಡುವಿನ ದೂರ 225ಮಿಲಿಯನ್ ಕಿಮೀ ಇರಬಹುದೆಂದು ಅಂದಾಜಿಸಲಾಗಿದೆ ಎಂದು ವಿವಿಧ ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ.