ದಿನದ ಸುದ್ದಿ
ಸಂಜೆ 4 ಕ್ಕೆ ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮೀಜಿ ಅಂತ್ಯಕ್ರಿಯೆ
ಸುದ್ದಿದಿನ,ಗದಗ: ಗದಗ ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ ತೋಂಟದಾರ್ಯ ಮಠದ ದ್ವಾರ ಬಾಗಿಲು ಮುಂಭಾಗದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಂದು 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರು ದರ್ಶನ ಮಾಡಬಹುದಾಗಿದೆ.
1 ಗಂಟೆಯಿಂದ ಗದಗ ನಗರದ ಪ್ರಮುಖ ಬೀದಿಗಳಲ್ಲಿ ತೋಂಟದಾರ್ಯ ಸ್ವಾಮೀಜಿ ಪಾರ್ಥಿವ ಶರೀರದ ಮೆರವಣಿಗೆಯು ನಡೆಯಲಿದ್ದು, ತೋಂಟದಾರ್ಯ ಮಠದಿಂದ, ರೋಟರಿ ಸರ್ಕಲ್, ಭೂಮರಡ್ಡಿ ಸರ್ಕಲ್, ಕೆ.ಎಚ್ ಪಾಟೀಲ್ ಸರ್ಕಲ್, ಬಸವೇಶ್ವರ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಮಹೇಂದ್ರಕರ್ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್ ಮೂಲಕ ಪುನಃ ತೋಂಟದಾರ್ಯ ಮಠಕ್ಕೆ ಬರಲಿದೆ ಮೆರವಣಿಗೆ. ಸಂಜೆ 4 ಗಂಟೆ ನಂತರ ಲಿಂಗಾಯತ ಧರ್ಮದ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9986715401