ದಿನದ ಸುದ್ದಿ

ಗದುಗಿನ ತೋಂಟದ ಶ್ರೀಗಳು ಇನ್ನಿಲ್ಲ..!

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕದ ಮಠಾಧೀಶರು ಜನತೆಯಲ್ಲಿ ಗೌರವ ಮತ್ತು ಪ್ರೀತಿ ಸರಳತೆ ಇಟ್ಟುಕೊಂಡವರಲ್ಲಿ ಗದುಗಿನ ತೋಂಟದ ಶ್ರೀಗಳು ಒಬ್ಬರು. ಈ ದಿನ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು.

ಕನ್ನಡದ ಸ್ವಾಮೀಜಿ, ಪುಸ್ತಕಗಳ ಸ್ವಾಮೀಜಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಅವರ ಓದು ಅಪಾರ. ಲಂಕೇಶ್ ಮತ್ತು ತೇಜಸ್ವಿಯವರ ಬರಹಗಳನ್ನು ಅಪಾರವಾಗಿ ಇಷ್ಟಪಡುತ್ತಿದ್ದ ಸ್ವಾಮಿಗಳು ಕನ್ನಡದ ಎಲ್ಲಾ ವೈಚಾರಿಕ ಕೃತಿಗಳನ್ನು ಶ್ತದ್ಧೆಯಿಂದ ಓದಿ, ಆತ್ಮೀಯ ಬಳಗದ ಜೊತೆ ಚರ್ಚಿಸುತ್ತಿದ್ದರು‌ ಕೂಡ.

ಡಾ.ಎಂ.ಎಂ. ಕಲ್ಬುರ್ಗಿಯವರ ಶಿಷ್ಯರಾಗಿ‌ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರಿಂದ ಅವರಿಗೆ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಕುರಿತು ವಿಶೇಷವಾದ ಕಾಳಜಿ ಇತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version