ರಾಜಕೀಯ
ಶರಿಯತ್ ಬಯಸುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್
ಸುದ್ದಿದಿನ ಡೆಸ್ಕ್: ಶರಿಯತ್ ಕಾನೂನು ಬಯಸುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತೆ ವಿವಾದಾತ್ಮಕ ಟೀಕೆ ಮಾಡಿ ಸುದ್ದಿಯಾಗಿದ್ದಾರೆ.
ಉನ್ನಾವ್ ನಗರದಲ್ಲಿ ಭಾನುವಾರ ಮಾತನಾಡಿದ ಅವರು, ದೇಶದಲ್ಲಿ ಶರಿಯಾತ್ ಬಯಸುವ ಮುಸ್ಲಿಂ ಸಮುದಾಯದವರು “ಪಾಕಿಸ್ತಾನಕ್ಕೆ ಹೋಗಬೇಕು” ಎಂದು ಹೇಳಿದ್ದಾರೆ.
ಮುಸ್ಲಿಮರ ವೈಯುಕ್ತಿಕ ವಿವಾದಗಳನ್ನು ಬಗೆಹರಿಸಲು ಕೆಲವು ಸಂಘಟನೆಗಳು ‘ಶರಿಯತ್ ನ್ಯಾಯಾಲಯಕ್ಕೆ ಆಗ್ರಹಿಸುತ್ತಿವೆ. ಆಗಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ವರದಿಗಾರನ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
“ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಭಾರತದ ಸಂವಿಧಾನವು ಬಹಳ ಬಲಶಾಲಿಯಾಗಿದೆ. ಇಲ್ಲಿ ಶರಿಯಾತ್ ನ ಅಗತ್ಯವಿಲ್ಲ. ಭಾರತವು ಅದರ ಸಂವಿಧಾನದ ಪ್ರಕಾರ ಮಾತ್ರ ಆಡಳಿತ ನಡೆಸುತ್ತದೆ ಮತ್ತು ಯಾವುದೇ ಷರಿಯಾತ್ ಪ್ರಕಾರವಲ್ಲ” ಎಂದು ಮಹಾರಾಜ್ ಹೇಳಿದ್ದಾರೆ.
ಭಾರತದ ಸಂವಿಧಾನದಲ್ಲಿ ನಂಬಿಕೆ ಹೊಂದದವರು ದೇಶದಲ್ಲಿ ಉಳಿಯಲು “ಯಾವುದೇ ಹಕ್ಕು ಇಲ್ಲ”. ಪಾಕಿಸ್ತಾನಕ್ಕೆ ಹೋಗುವವರಿಗೆ ಸಂತೋಷದಿಂದ ವಿದಾಯ ಹೇಳುತ್ತೇವೆ ಎಂದು ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
English summary: Those who want Shariat ‘may go to Pakistan’: BJP MP Sakshi Maharaj