ದಿನದ ಸುದ್ದಿ
ಔಷಧ ತಯಾರಿಕಾ ಉದ್ಯಮಕ್ಕೆ ನೆರವಾಗುವ ಸಂಶೋಧನಾ ನೀತಿ ಜಾರಿಗೆ ಚಿಂತನೆ : ಮನ್ಸುಖ್ ಮಾಂಡವೀಯ
ಸುದ್ದಿದಿನ ಡೆಸ್ಕ್ : ಭಾರತೀಯ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಸಮಾವೇಶದ 7ನೇ ಆವೃತ್ತಿ ಮುಂದಿನ ಸೋಮವಾರ ನವದೆಹಲಿಯಲ್ಲಿ ನಡೆಯಲಿದೆ.
ಮೂರು ದಿನಗಳ ಈ ಸಮಾವೇಶಕ್ಕೆ ವಿಷನ್ 2047-ಭವಿಷ್ಯಕ್ಕಾಗಿ ಪರಿವರ್ತನಾ ನೀಲನಕ್ಷೆ ಎಂಬುದು ಧ್ಯೇಯವಾಕ್ಯವಾಗಿದೆ. ಔಷಧ ತಯಾರಿಕಾ ಉದ್ಯಮ ಹಾಗೂ ವೈದ್ಯಕೀಯ ಉಪಕರಣಗಳ ತಯಾರಕರನ್ನು ಭಾಗೀದಾರರನ್ನು ಹಾಗೂ ಶಿಕ್ಷಣ ತಜ್ಞರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ.
ಮುಂದಿನ 25 ವರ್ಷಗಳಿಗೆ ಉದ್ಯಮದ ಬೆಳವಣಿಗೆಗೆ ಭವಿಷ್ಯದ ನೀಲನಕ್ಷೆ ರೂಪಿಸುವುದು ಈ ಉದ್ದೇಶದಲ್ಲಿ ಪ್ರಮುಖ ಅಂಶವಾಗಿದೆ.
ಸಮಾವೇಶ ಕುರಿತು ನವದೆಹಲಿಯಲ್ಲಿಂದು ಸುದ್ದಿಗಾರರಿಗೆ ತಿಳಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ, ಮುಂದಿನ 25ವರ್ಷಗಳಿಗೆ ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕಾ ಉದ್ಯಮಗಳನ್ನು ಮುನ್ನಡೆಸುವ ಕುರಿತು ಭಾಗಿದಾರರು ಕಾರ್ಯ ತಂತ್ರರೂಪಿಸಲು ಈ ಸಮಾವೇಶ ಸಹಕಾರಿಯಾಗಲಿದೆ ಎಂದು ಹೇಳಿದರು.
ತಯಾರಿಕ ಉದ್ಯಮವನ್ನು ಸದೃಢಗೊಳಿಸುವ ಸಂಬಂಧ ಉದ್ಯಮಿದಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದಾರೆ. ಪೇಟೆಂಟ್ ಹೊಂದಿರುವ ಔಷಧ ತಯಾರಿಕಾ ಉದ್ಯಮಕ್ಕೆ ಸಹಕಾರಿಯಾಗುವ ಸಂಶೋಧನೆ ಮತ್ತು ಅನ್ವೇಷಣಾ ನೀತಿಯೊಂದನ್ನು ಸರ್ಕಾರ ಜಾರಿಗೆತರಲು ಈ ಸಮಾವೇಶ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.
Addressed curtain-raiser press conference on the 7th edition of India Pharmaceutical & Medical Devices 2022, from 25th – 27th April.
We will engage with industry & academia to chalk the roadmap for Pharma & Medical Devices for the next 25 years.
📖 https://t.co/KnRM4lT8MK pic.twitter.com/ElbnG8fdtU
— Dr Mansukh Mandaviya (@mansukhmandviya) April 22, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243