ದಿನದ ಸುದ್ದಿ

ಕೊಲೆ ಬೆದರಿಕೆ ; ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ ಮಹಿಳೆ

Published

on

ಸುದ್ದಿದಿನ,ಕೊಪ್ಪಳ: ಕೊಪ್ಪಳ ಜಿಲ್ಲೆಯ ಕೊಟ್ಟೂರು ಸ್ವಾಮೀಜಿ ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿರುವುದರ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಾಗಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ಧ ಆರೋಪಿಸಿರುವ ಕಮಲಾಕ್ಷಿ ಎಂಬವರು ದೂರು ನೀಡಿದ್ದಾರೆ.

ಕೊಟ್ಟೂರೇಶ್ವರ ಕಾಲೇಜಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಕಮಲಾಕ್ಷಿಗೆ ಬಸಲಿಂಗಮ್ಮ ಅವರಿಗೆ ಅವ್ಯಾಚ್ಯವಾಗಿ ನಿಂದಿಸಿ, ಗಲಾಟೆ ಮಾಡಿ, ಸ್ವಾಮೀಜಿ ಬಳಿ ಪಿಸ್ತೂಲ್ ಇದೆ, ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬಸಲಿಂಗಮ್ಮ ಬೆದರಿಕೆ ಹಾಕಿರುವುದಾಗಿ ಕಮಲಾಕ್ಷಿ ಅವರು ದೂರಿನಲ್ಲಿ ನಮೂದಿಸಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಿದ್ದ ಕೊಟ್ಟೂರು ಸ್ವಾಮೀಜಿ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಮಲಾಕ್ಷಿ ಆರೋಪಿಸಿದ್ದಾರೆ.

ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ಧ ಕಲಂ 323, 324, 504 ಹಾಗೂ 506 ಅಡಿಯಲ್ಲಿ ದೂರನ್ನು ದಾಖಲಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version