ದಿನದ ಸುದ್ದಿ

ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಸಾವು

Published

on

ಸುದ್ದಿದಿನ,ಟಿ.ನರಸೀಪುರ : ತಾಲ್ಲೂಕಿನ ಬನ್ನೂರು ಹೋಬಳಿ ಅಂಕನಳ್ಳಿ ಗ್ರಾಮಕ್ಕೆ ಬಳ್ಳಾರಿ ಜಿಲ್ಲೆಯಿಂದ ಕಬ್ಬು ಕಟಾವಿಗೆ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಕುಟುಂಬದ ಮೂರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿವೆ.

ಕೂಲಿ ಅರಸಿ ರಾಜ್ಯದ ನಾನಾ ಭಾಗಗಳಿಂದ ಜೀವನ ನಿರ್ವಹಣೆ ಮಾಡಲು ತಮ್ಮ ಇಡೀ ಕುಟುಂಬದ ಸದಸ್ಯರೊಂದಿಗೆ ಕೂಲಿ ಇರುವ ಕಡೆ ಬೀಡು ಬಿಟ್ಟು ಹೊಟ್ಟೆ ಒರೆಯುವ ಈ ಕುಟುಂಬಗಳು ಹಸುಗೂಸುಗಳನ್ನು ಒಂದು ಕಡೆ ಆಡಲು ಬಿಟ್ಟು ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ.

ಅದೇ ರೀತಿಯಾಗಿ ಮಂಗಳವಾರ ನಡೆದ ಘಟನೆಯಲ್ಲಿ ಪೋಷಕರು ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಪಕ್ಕದಲ್ಲೇ ಇದ್ದ ಕೃಷಿ ಹೊಂಡದಲ್ಲಿ ಕೇವಲ ಮೂರು ಅಡಿಗಳಷ್ಟು ನೀರು ತುಂಬಿದ್ದು, ಇದರ ಅರಿವಿಲ್ಲದ ಮೂರು ವರ್ಷ ಪ್ರಾಯದ ಮಕ್ಕಳು ಆಟವಾಡುತ್ತ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿರುತ್ತಾರೆ.

ಬಳ್ಳಾರಿ ಜಿಲ್ಲೆಯಿಂದ ಆಗಮಿಸಿದ್ದ ಈ ಬಡ ಕೂಲಿ ಕಾರ್ಮಿಕ ವರ್ಗಕ್ಕೆ ದುಃಖ ತಡೆಯುವ ಶಕ್ತಿಯನ್ನು ನೀಡಲಿ ಹಾಗೂ ಕಬ್ಬು ಕಾರ್ಖಾನೆ ಮಾಲೀಕರು ಈ ಕುಟುಂಬ ವರ್ಗಕ್ಕೆ ಆರ್ಥಿಕ ಸಹಾಯ ನೀಡಬೇಕೆಂದು ರೈತ ಮುಖಂಡ ಬನ್ನೂರು ನಾರಾಯಣ್ ಆಗ್ರಹಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version