ದಿನದ ಸುದ್ದಿ
ಪರಪ್ಪನ ಅಗ್ರಹಾರದ ಡೆಂಟಲ್ ಕ್ಲಿನಿಕ್ ವಾಹನದಲ್ಲಿ ಮೂರು ಕೇಜಿ ಗಾಂಜಾ…?
ಸುದ್ದಿದಿನ ಡೆಸ್ಕ್ : ಪರಪ್ಪನ ಅಗ್ರಹಾರದಲ್ಲಿ ಪತ್ತೆಯಾಗಿದೆ ಮೂರು ಕೆ ಜಿ ಗಾಂಜಾ. ಚಾಲಕ ಭಾನು ಪ್ರಕಾಶ್ ಎಂಬಾತನ ವಾಹನದಲ್ಲಿದ್ದ ಗಾಂಜಾವನ್ನು ಸೈಕಲ್ ರವಿ ಪ್ರಕರಣದ ಆರೋಪಿ ವಿನೋದ್ ಎಂಬಾತನಿಗೆ ಸಪ್ಲೈ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಘಟನೆ ನಡೆದಿದೆ.
ವಾಹನ ತಪಾಸಣೆ ಮಾಡಿದ ಸೆಂಟ್ರಿ ದಿಲೀಪ್ ಕೈಗೆ ಸಿಕ್ಕಿ ಬಿದ್ದಿದ್ದಾನೆ ಭಾನು ಪ್ರಕಾಶ್.ಬುಧವಾರ ಸಂಜೆ 4-30ರ ಸಂಧರ್ಬದಲ್ಲಿ ನಡೆದಿದೆ ಈ ಘಟನೆ. ಸಿಕ್ಕಿಬಿದ್ದ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಜೈಲು ಅಧಿಕಾರಿ ..? ಒಂದೂವರೆ ಲಕ್ಚ ಹಣ ಪಡೆದು ಆರೋಪಿಯನ್ನ ಬಿಟ್ಟು ಕಳಿಸಿರುವುದಾಗಿ ಆರೋಪಸಿರುವ ಖೈದಿಗಳು.