ಸಿನಿ ಸುದ್ದಿ

‘ತ್ರೀ ಮಸ್ಕಟೀಯರ್ಸ್’ ಬಿ-ಟೌನ್ ಬ್ಯೂಟಿ ಗಳ ದೋಸ್ತಿ-ಮಸ್ತಿ ಗೆ ಸಾಕ್ಷಿ ಆಯ್ತು ಸಲ್ಲು ಮಿಯಾ ರ ದಬ್ಬಂಗ್ ರಿಲೋಡೆಡ್..!

Published

on

ಬಾಲಿವುಡ್ ನಲ್ಲಿ  ಈಗ ಸ್ನೇಹದ ಅಲೆ ಎದ್ದಿದೆ…!


ಬಿ-ಟೌನ್ ದುನಿಯಾದ ಸುಲ್ತಾನ್… ಸಲ್ಮಾನ್ ಖಾನ್ ರೊಂದಿಗೆ  “ದಬ್ಬಂಗ್ ರಿಲೋಡೆಡ್” ನಲ್ಲಿ ಮಿಂಚುತ್ತಿದ್ದಾರೆ ಬಾಲಿವುಡ್ ತಾರೆಯರು.. ಕತ್ರಿನಾ ಕೈಫ್,  ಜಕ್ವಿಲೀನ್ ಫರ್ನಾಂಡೀಸ್, ಸೊನಾಕ್ಷಿ ಸಿನ್ಹಾ, ಸೇರಿದಂತೆ ಹಲವು ಬಿಟೌನ್ ನಟ-ನಟಿಯರು ಸಲ್ಲು ಗೆ ಸಾಥ್ ನೀಡಿದ್ದಾರೆ.

 

ಸಲ್ಮಾನ್ ಖಾನ್ ರ ಡ್ಯಾನ್ಸ್-ಮ್ಯೂಸಿಕ್ ಕಾಂಸರ್ಟ್  ಗಾಗಿ, ಸಲ್ಲು ಆಂಡ್ ಗ್ಯಾಂಗ್ ಜೊತೆ ದೇಶ-ವಿದೇಶ ಸುತ್ತುತ್ತಿರುವ ಬಾಲಿವುಡ್ ಚೆಲುವೆ ಯರ ಕಾನ್ಸರ್ಟ್ ಫೋಟೋ ಗಳು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿರುವ ಬೆನ್ನಲ್ಲೇ… ಬಿ-ಟೌನ್ ನ  ಮೂರು ಟಾಪ್ ನಟಿಯರು ಲಾಸ್ ಏಂಜಲಿಸ್ ನಿಂದ ದಲ್ಲಾಸ್ ಗೆ ಹೊರಡುವ ಮುನ್ನ ಕ್ಲಿಕ್ಕಿಸಿದ  ಫೋಟೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಕತ್ರೀನಾ ಕೈಫ್ , ಜಕ್ವಿಲೀನ್ ಫರ್ನಾಂಡೀಸ್  ಮತ್ತು ಸೊನಾಕ್ಷಿ ಸಿನ್ಹಾ ವಿಮಾನದಲ್ಲಿ ಮೆಟ್ಟಿಲ ಮೇಲೆ ನಿಂತು ಕ್ಲಿಕ್ಕಿಸಿ ಕೊಂಡಿರುವ ಫೋಟೋ, ಈ ಮೂರೂ ಸುಂದರಿಯರು  ತಮ್ಮ ಇಂಸ್ಟಾ ಅಕೌಂಟ್ ನಲ್ಲಿ ಹಂಚಿಕೊಂಡಿದ್ದು.. ಬಾಲಿವುಡ್ ತಾರೆಯರು ಸ್ನೇಹ ಸಂಬಂಧ ಕ್ಕೆ ಸಾಕ್ಷ್ಯ ವೆಂಬಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ನಡುವೆ ಕತ್ರೀನಾ ಮತ್ತು ರೇಸ್3 ಬೆಡಗಿ ಜಕ್ವಿಲೀನ್ ಫರ್ನಾಂಡೀಸ್ ನಡುವಿನ ಕೋಳಿ ಜಗಳ ದ ಪುಕಾರಿಗೂ ಮುಕ್ತಾಯ ಹಾಡಿದ್ದಾರೆ.

 

ಸಲ್ಮಾನ್ ಖಾನ್ ರ ಮೂರು ಹೀರೂಯಿನ್ ಗಳು. ತಮ್ಮದೇ ವಿಶಿಷ್ಟ ವಾದ ಏರ್ಪೋಟ್ ಲುಕ್ ನಲ್ಲಿ  ಮಿಂಚುತ್ತಿದ್ದಾರೆ. ಜಕ್ವಿಲೀನ್ ಫರ್ನಾಂಡೀಸ್ ರ ಡೆನಿಮ್ ಆನ್ ಡೆನಿಮ್ ಲುಕ್ ಹೊಸ ಫ್ಯಾಷನ್ ಸ್ಟೇಟ್ ಮೆಂಟ್ ನೀಡುತ್ತಿದೆ . ಲೋ ವೇಸ್ಟ್ ಪೆಂಸಿಲ್ ಕಟ್ ಟೋರ್ನ ಡೆನಿಮ್ ಪ್ಯಾಂಟ್ ಮತ್ತು ಪಫ್ಡ್ ಲಾಂಗ್ ಸ್ಲೀವ್ ನ ಡೆನಿಮ್ ಕ್ರಾಪ್ ಟಾಪ್ ಫ್ಯಾಷನ್ ಪ್ರಿಯರಿಗೆ ಹೊಸ ಸ್ಟೈಲ್ ಕೋಷಂಟ್ ನೀಡಿದೆ.

 

ಕತ್ರೀನಾ ರ ಬ್ಲಾಕ್ ಆನ್ ಬ್ಲಾಕ್ ಲುಕ್ ಸಖತ್  ಸಿಂಪಲ್ ಮತ್ತು ಸೆಕ್ಸಿ ಎನಿಸುತ್ತದೆ. ಇನ್ನು ಸೊನಾಕ್ಷಿ ಸಿನ್ಹಾ ರ ಬ್ಲಾಕ್ ಲಾಂಗ್ ಕೋಟ್ ಮತ್ತು ಲೋ ವೇಸ್ಟ್ ಗ್ರೀನ್ ಮಿಲಿಟರಿ ಪ್ಯಾಂಟ್  ಸೆಲಿಬ್ರಿಟಿ  ಏರ್ಪೋಟ್ ಲುಕ್ ನ ಹೈಲೈಟಾಗಿದೆ.

– ಚಿತ್ರಶ್ರೀ ಹರ್ಷ

ಸುದ್ದಿದಿನ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version