ದಿನದ ಸುದ್ದಿ
ಹುಟ್ಟು ಹಬ್ಬದ ಸಂಭ್ರಮದಲ್ಲಿ ರವಿಮಾಮ ಮಗ : ಇಂದು ‘ತ್ರಿವಿಕ್ರಮ’ ಟೀಸರ್ ರಿಲೀಸ್..!
ಸುದ್ದಿದಿನ ಡೆಸ್ಕ್: ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಅವರ ತ್ರಿವಿಕ್ರಮನ ಬಗ್ಗೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದೆ. ಕೊರೊನಾ ಎಫೆಕ್ಟ್ನಿಂದ ಈಗಾಗ್ಲೇ ರಿಲೀಸ್ ಆಗ್ಬೇಕಿದ್ದ ಈ ತ್ರಿವಿಕ್ರಮ ಈಗ ಕೊಂಚ ತಡವಾಗಿದೆ. ಹಾಗಾಗಿ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದೆ ತಮ್ಮ ಹುಟ್ಟುಹಬ್ಬದಂದು ಟೀಸರ್ ರಿಲೀಸ್ ಮಾಡ್ತಿದೆ ಚಿತ್ರತಂಡ.
ತ್ರಿವಿಕ್ರಮ ಟೀಸರ್ ರಲೀಸ್
ವಿಕ್ರಮ್ ನನ್ನ ಕಣ್ತುಂಬಿಕೊಳ್ಳೋಕೆ ಕ್ರೇಜಿ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ವಿಕ್ರಮನ ಅಪಿಯರೆನ್ಸ್, ಗೆಟಪ್, ಮ್ಯಾನರಿಸಂಗೆ ಈಗಾಗ್ಲೇ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಟೀಸರ್ ಸಾಕಷ್ಟು ಕುತೂಹಲ ಕೆರಳಿಸಿದೆ. ಸದ್ಯ ಚಿತ್ರದ ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದ್ದು, ಆ ಎರಡು ಹಾಡುಗಳು ಮುಗಿದ್ರೆ, ಸಿನಿಮಾ ರಿಲೀಸ್ಗೆ ರೆಡಿಯಾಗುತ್ತೆ. ಈ ನಡುವೆ ಆಗಸ್ಟ್ 16 ಭಾನುವಾರ ದಂದು ವಿಕ್ರಂ ಬರ್ತ್ಡೇ ಇರೋದ್ರಿಂದ, ಟೀಸರ್ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಚಿತ್ರತಂಡ ಮುಂದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243