ದಿನದ ಸುದ್ದಿ

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಸಾವು

Published

on

ಸುದ್ದಿದಿನ, ಚಾಮರಾಜನಗರ : ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಗಂಡು ಹುಲಿ ಸಾವನ್ನಪ್ಪಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಉಪ ವಿಭಾಗ, ಓಂಕಾರ ವನ್ಯಜೀವಿ ವಲಯ ಕುರುಬರಹುಂಡಿ ಸಮೀಪ ಅರದೇವನಕಟ್ಟೆ ಅರಣ್ಯ ಪ್ರದೇಶದ ಬಳಿ ಸುಮಾರು 6ರಿಂದ 7 ವರ್ಷದ ಗಂಡು ಹುಲಿಯ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಗುಂಡ್ಲುಪೇಟೆ ಉಪ ವಿಭಾಗದ ಎಸಿಎಫ್ ಕೆ.ಪರಮೇಶ್, ಇಲಾಖೆಯ ಪಶುವೈದ್ಯಾಧಿಕಾರಿಡಾ.ವಸೀಂಮಿರ್ಜಾ, ಬರಗಿ ಗ್ರಾಮ ಪಂಚಾಯತಿ ಸದಸ್ಯ ಸೂರ್ಯಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೃತ ಹುಲಿಯ ಎಲ್ಲಾ ಉಗುರುಗಳು, ಹಲ್ಲುಗಳು ಹಾಗೂ ಇತರ ಅಂಗಾಂಗಗಳು ಸುರಕ್ಷತವಾಗಿದ್ದು, ಹುಲಿಯು ಮತ್ತೊಂದು ಹುಲಿಯೊಂದಿಗೆ ಕಾದಾಟ ನಡೆಸಿ ಗಾಯಗಳಾಗಿ ಮೃತಪಟ್ಟಿದೆ ಎಂದು ಹೇಳಲಾಗಿದೆ.

ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಮೃತದೇಹವನ್ನು ಸುಡಲಾಯ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version