ಕ್ರೀಡೆ

ಟೈಟ್ ಫೈಟ್ ಗೆ ಸಾಕ್ಷಿಯಾಗಲಿದೆ ಮುಂಬಯಿನ ಬ್ರೆಬೋರ್ನ್ ಕ್ರೀಡಾಂಗಣ..!

Published

on

ಸುದ್ದಿದಿನ ಡೆಸ್ಕ್ : 12 ವರ್ಷಗಳ ನಂತರ ಆತಿಥ್ಯವನ್ನು ವಹಿಸಿಕೊಂಡಿರುವ ಬ್ರೆಬೋರ್ನ್ ಕ್ರೀಡಾಂಗಣ ಮಧ್ಯಾನ್ಹ 1:25 ಕ್ಕೆ ಮುಂಬೈಕರ್ ಖ್ಯಾತಿಯ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರವರು ಗಂಟೆ ಬಾರಿಸುವ ಮೂಲಕ ಚಾಲನೆ ನೀಡಲಿದ್ದಾರೆ.

ಸರಣಿಯಲ್ಲಿ ಭಾರತ ಮತ್ತು ವಿಂಡೀಸ್ ಸಮಬಲ ಹೊಂದಿರುವ ಕಾರಣ 4 ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಉಭಯ ತಂಡಗಳು ತಮ್ಮೆಲ್ಲಾ ಶಕ್ತಿ ಸಾಮರ್ಥ್ಯವನ್ನು ಪಣಕ್ಕಿಟ್ಟು ಪ್ರತಿಷ್ಟೆಯನ್ನು‌ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಒತ್ತಡ ಉಭಯ ತಂಡಗಳ ಮೇಲಿದೆ.

ಬ್ಯಾಟಿಂಗ್ ಪಿಚ್ ಎಂದು ಕ್ಯುರೇಟರ್ಗಳು ವಿಶ್ಲೇಷಣೆ ಮಾಡಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸತತ 4 ನೇ ಶತಕ ಸಿಡಿಸುವ ಮೂಲಕ ಮತ್ತೊಂದು ದಾಖಲೆಯನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version