ದಿನದ ಸುದ್ದಿ
ದಾವಣಗೆರೆ | ತಿಂಗಳ ಅಂಗಳ ಬಳಗದ ಮೇ ಕವಿಗೋಷ್ಠಿ
ಸುದ್ದಿದಿನ, ದಾವಣಗೆರೆ : ಮೇ 29 ರ ಭಾನುವಾರ ದಾವಣಗೆರೆ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಕವಿ ಅಣಬೇರು ತಾರೇಶ್ ಕೆ ಪಿ ಅವರ ಪುಸ್ತಕ ” ನೀರ ಮೇಲಿನ ರಂಗೋಲಿ ” ಹಾಗೂ ಧ್ವನಿ ಸುರುಳಿ ” ಹಳ್ಳಿ ಹೈದನ ನೊಂದ ಹಾಡು ” ಲೋಕಾರ್ಪಣೆ ಕಾರ್ಯಕ್ರಮದ ನಂತರ ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗದ ವತಿಯಿಂದ ಮೇ ತಿಂಗಳ ಕವಿಗೋಷ್ಠಿ ನಡೆಯಿತು.
ಬಳಗದ ಕವಿ ಮಿತ್ರರಾದ ಶಿವಯೋಗಿ ಹಿರೇಮಠ, ಕೆ ಎನ್ ಸ್ವಾಮಿ, ರಾಜಶೇಖರ್ ಗುಂಡಗಟ್ಟಿ, ವೀರೇಶ್ ಬಿ ಜಿ ಎಂ, ಪ್ರವೀಣ್, ಗಂಗಾಧರ ಬಿ ಎಲ್ ನಿಟ್ಟೂರ್, ಸತ್ಯಭಾಮ ಮಂಜುನಾಥ್, ಉಮಾದೇವಿ ಹಿರೇಮಠ, ಚಂದ್ರಿಕಾ ಜಗನ್ನಾಥ್ ಸೇರಿದಂತೆ ಇತರರು ವೈವಿಧ್ಯಮಯ ಸ್ವರಚಿತ ಕವನ ವಾಚಿಸಿದರು.
ಇದೇ ವೇಳೆ ಉದಯೋನ್ಮುಖ ಗಾಯಕ ಜಿ ವಿ ಆಕಾಶ್, ಕವಯಿತ್ರಿ, ಗಾಯಕಿ ಸುಭಾಷಿಣಿ ಮಂಜುನಾಥ್ ಹಾಗೂ ಸಮಾಜ ಸೇವಕಿ ಶ್ರೀಮತಿ ಮಹಾದೇವಮ್ಮ ಅವರಿಂದ ಗೀತ ಗಾಯನ ನೆರವೇರಿತು.
ಆತಿಥ್ಯ ವಹಿಸಿದ್ದ ಕವಿ ತಾರೇಶ್, ಕುಟುಂಬ ವರ್ಗ ಹಾಗೂ ಬಂಧುಮಿತ್ರರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243