ದಿನದ ಸುದ್ದಿ
ಟಿಪ್ಪು ಜಯಂತಿ ಯಶಸ್ವಿಗೊಳಿಸಲು ಸರ್ಕಾರದಿಂದ ಭಾರಿ ಸಿದ್ಧತೆ
ಸುದ್ದಿದಿನ,ಬೆಂಗಳೂರು : ನವೆಂಬರ್ 10ರಂದು ಸಂಜೆ 6.30ಕ್ಕೆ ವಿಧಾನಸೌದದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸರ್ಕಾರದಿಂದ ಟಿಪ್ಪು ದಿನಾಚರಣೆಗೆ ಪ್ಲಾನ್ ನಡೆದಿದ್ದು, ನಿನ್ನೆ ಟಿಪ್ಪು ಜಯಂತಿ ಬಗ್ಗೆ ನಡೆದ ಸಭೆಯ ನಂತರ ಸಿಎಂ ಜೊತೆ ಚರ್ಚಿಸಿ ಮುಸ್ಲಿಂ ಗುರುವಿಗೆ ಆಹ್ವಾನ ನೀಡಲಾಗಿದೆ.
ಕರ್ನಾಟಕ ಹಜರತ್ ಮೌಲಾನಾ ಸಘೀರ್ ಅಹಮದ್ ನ ಮುಸ್ಲಿಂ ಗುರುಗಳಾದ ಆಮೀರ್ ಇ ಶಾರಿಯತ್ ರವರನ್ನ ಕಾರ್ಯಕ್ರಮಕ್ಕೆ ಸಚಿವೆ ಜಯಮಾಲಾ ಮತ್ತು ಸಚಿವ ಜಮೀರ್ ಅಹಮದ್ ಇಬ್ಬರು ಶಾರಿಯತ್ ರವರ ಮನೆಗೆ ತೆರಳಿ ಸರ್ಕಾರದ ವತಿಯಿಂದ ಆಯೋಜಿಸುತ್ತಿರುವ ಟಿಪ್ಪುಜಯಂತಿಗೆ ಆಹ್ವಾನ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವರಾದ ಜಯಮಾಲ, ಜಮೀರ್ ಅಹಮದ್ ಖಾನ್, ಶಾಸಕ ರೋಷನ್ ಬೇಗ್ ಸೇರಿದಂತೆ ಸರ್ಕಾರದ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401