ದಿನದ ಸುದ್ದಿ

‘ಟಿಪ್ಪು ಪ್ರತಿಮೆ‌’ ಸಂಸತ್ ಭವನದ ಮುಂದೆ ನಿರ್ಮಾಣವಾಗಬೇಕು‌ : ವಾಟಾಳ್ ಒತ್ತಾಯ

Published

on

ಸುದ್ದಿದಿನ,ಮಂಡ್ಯ : ಇದೊಂದು ಅಧ್ಬುತ ಸ್ಥಳ, ಟಿಪ್ಪು ವೀರಾವೇಶದಿಂದ ಹೋರಾಟ ಮಾಡಿದ ಸ್ಥಳ.ಈ ಪ್ರದೇಶವನ್ನು ಈ ಪುರಾತತ್ವ ಇಲಾಖೆ ಪ್ಯಾಕೇಜ್ ರೂಪದಲ್ಲಿ‌ ಅಭಿವೃದ್ದಿ ಪಡಿಸಬೇಕು. ಟಿಪ್ಪು ಪ್ರತಿಮೆ‌ ಸಂಸತ್ ಭವನದ ಮುಂದೆ ನಿರ್ಮಾಣವಾಗಬೇಕು‌ ಇದು ನಮ್ಮ ಒತ್ತಾಯ ಎಂದು ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಹೇಳಿದರು.

ಟಿಪ್ಪು ಹೆಸರಲ್ಲಿ ಒಂದು ದೊಡ್ಡ ಪ್ರಶಸ್ತಿ ‌ ಜ್ಯಾತಾತೀತರಿಗೆ ನೀಡಲು‌ರಾಜ್ಯ ಸರ್ಕಾರ ನಿರ್ಧರಿಸಬೇಕು. ಆದರೆ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ವಾಟಾಳ್ ವಿರೋಧವ್ಯಕ್ತ ಪಡಿಸಿದ್ದು, ನಮಗೆ ಕನ್ನಂಬಾಡಿ ಕಟ್ಟೆಯೇ ಕಾವೇರಿ,ಆದನ್ನ ಬಿಟ್ಟು ಈ ಪ್ರತಿಮೆ ಅವಶ್ಯಕತೆ ಇಲ್ಲ ಎಂದರು.

ಈ ಪ್ರದೇಶದಲ್ಲಿ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗೋವಾಗ ಜಲಾಶಯಕ್ಕೆ ಕಾರಣವಾಗಲಿದೆ. ಈ ಯೋಜನೆಯನ್ನು ಸರ್ಕಾರ ಕೈ ಬಿಡಲು 15 ದಿನಗಳ ಕಾಲಾವಕಾಶ ನೀಡ್ತೇವೆ. ಈ ಯೋಜನೆಯನ್ನು ಕೈಬಿಡೋ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸದಿದ್ರೆ‌ ಹೋರಾಟ ಮಾಡ್ತೇವೆ. ಈ ವಿಚಾರವಾಗಿ ಮುಂದಿನ ವಾರ ಕೆ.ಆರ್.ಎಸ್. ಜಲಾಶಯ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದು ಗುಡುಗಿದರು.

ಉತ್ತರ ಕರ್ನಾಟಕದ ಕಬ್ಬು ಬೆಳೆಗಾರ ಹೋರಾಟಕ್ಕೆ ನಮ್ಮ‌ ಸಂಪೂರ್ಣ ಬೆಂಬಲವಿದೆ.
ಸರ್ಕಾರ ರೈತರ ಸಮಸ್ಯೆ ಬಗೆ ಹರಿಸಲು 15 ದಿನ ಕಾಲಾವಕಾಶ ಕೇಳಿದೆ.15 ದಿನದಲ್ಲಿ ಆ ರೈತರ ಸಮಸ್ಯೆ ಬಗೆ ಹರಿಸದಿದ್ರೆ ಕರ್ನಾಟಕ ಬಂದ್ ಗೆ ಕರೆ ನೀಡುವುದಾಗಿ‌ ವಾಟಾಳ್ ಎಚ್ಚರಿಕೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version