ಲೈಫ್ ಸ್ಟೈಲ್
ಬಾಲಿವುಡ್ ಅಂಗಳದಲ್ಲಿ ರಂಗೇರಿದ ತಿರಂಗ ಸೀರೆ ಸ್ಟೈಲ್..!
ಆಗಸ್ಟ್ 15ರ 72ನೇ ಸ್ವಾತಂತ್ರ್ಯ ದಿನಾಚರಣೆ, ಇಡೀ ಭಾರತ ದೇಶ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಎಲ್ಲೆಲ್ಲೂ ಕೇಸರಿ, ಬಿಳಿ, ಹಸಿರು ಬಣ್ಣದ ಆರ್ಭಟ ಜೋರಾಗಿದೆ. ಥಳಕು ಬೆಳಕಿನ ಫ್ಯಾಷನ್ ದುನಿಯಾದಲ್ಲಿ ಕೂಡಾ ತಿರಂಗ ಹವಾ ಜೋರು. ಬಾಲಿವುಡ್ ಅಂಗಳದಲ್ಲೂ ತಿರಂಗ ಫ್ಯಾಷನ್ ರಂಗವಲ್ಲಿ ಬಿಡಿಸಿದ್ದಾರೆ ನಟೀಮಣಿಯರು.
ಶಾಂತಿ, ತ್ಯಾಗ, ಸಮೃದ್ಧಿಯ ಸಂಕೇತ ವಾದ ತ್ರಿವರ್ಣ ಬಣ್ಣದ ಆಕರ್ಷಕ ವಿನ್ಯಾಸದ ಉಡುಪುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬಾಲಿವುಡ್ ತಾರಾಲೋಕ ಈ ತಿರಂಗ ಫ್ಯಾಷನ್ ನ ಅಳವಡಿಸಿ ಕೊಂಡಿದ್ದು ಹೀಗೆ.
ನಗ್ಮ, ಮಾಧುರೀ ದೀಕ್ಷಿತ್ , ಮಂದಿರಾ ಬೇಡಿ, ಸೋನಮ್ ಕಪೂರ್ ಸೇರಿದಂತೆ ಹಲವಾರು ನಟಿಯರು ತಿರಂಗ ಸೀರೆ ಗಳಿಗೆ ಮನಸೋತಿದ್ದು, ಸ್ವತಂತ್ರ ದಿನಾಚರಣೆ ಗೆ ಹೇಳಿಮಾಡಿಸಿದಂತಿದೆ ಇವರ ತಿರಂಗ ಸ್ಯಾರೀ ಸ್ಟೈಲ್… ಇದು ನೋಡಿದ ಫ್ಯಾಷನ್ ಲೋಕ ಜೈ ಹೋ ಎಂದು ತಲೆದೂಗುತ್ತಿದೆ.
ಈ ಸಿನಿ ತಾರೆಯರ ತಿರಂಗ ಸೀರೆ ಸ್ಟೈಲ್ ಗೆ ನೀವೂ ಫುಲ್ ಫಿದಾ ಆಗಿದ್ದಲ್ಲಿ ಈ ಸ್ವತಂತ್ರ ದಿನಾಚರಣೆ ಯಂದು ನೀವೂ ತಿರಂಗ ಬಣ್ಣದ ಅಲೆಯಲ್ಲಿ ಒಂದಾಗಿ.
ಜೈ ಹಿಂದ್