ದಿನದ ಸುದ್ದಿ

ತಿರುಪತಿ ತಿಮ್ಮಪ್ಪನ ದರ್ಶನ |ದಿನಕ್ಕೆ 30ಸಾವಿರ ಭಕ್ತರಿಗೆ ಮಾತ್ರ ಅವಕಾಶ

Published

on

ಸುದ್ದಿದಿನ ಡೆಸ್ಕ್ : ಭಾರತದ ಶ್ರೀಮಂತ ದೇವರುಗಳಲ್ಲಿ ಒಬ್ಬ ತಿರುಪತಿ ತಿಮ್ಮಪ್ಪನ ದರ್ಶನ ಕೆಲವು ದಿನಗಳ ಕಾಲ ಭಕ್ತರ ಸಂಖ್ಯೆ ಮೇಲೆ ನಿರ್ಬಂಧ ಹೇರಿದ್ದು, ದಿನವೊಂದಕ್ಕೆ 30,000 ಭಕ್ತರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಆಗಸ್ಟ್ 11ರಂದು “ಅಷ್ಟ ಬಂಧನ ಬಾಲಾಲಯ ಮಹಾ ಸಂಪ್ರೋಕ್ಷಣಂ” ಮಹಾ ಕಾರ್ಯಕ್ಕೆ ಸಿದ್ಧತೆ ನಡೆದಿದ್ದು, ಇದನ್ನು 12 ವರ್ಷಗಳಿಗೊಮ್ಮೆ ವೈದಿಕ ಪದ್ಧತಿಯಂತೆ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನದ ಗರ್ಭಗುಡಿಯ ನವೀಕರಣ ಕಾರ್ಯ ಆಗಸ್ಟ್ 12ರಿಂದ 16ರ ತನಕ ನಡೆಯಲಿದೆ. ಆಗಮ ಶಾಸ್ತ್ರದ ನಿಯಮದಂತೆ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ದೇಗುಲದ ಗರ್ಭಗುಡಿಯ ನವೀಕರಣ ನೆರವೇರಲಿದೆ. ಈ ಅವಧಿಯಲ್ಲಿ ಹೆಚ್ಚೆಂದರೆ 30,000 ಭಕ್ತರಿಗೆ ಮಾತ್ರ ದರ್ಶನ ಭಾಗ್ಯ ಸಿಗಲಿದೆ.

ಮಹಾಪೂಜಾ ಕಾರ್ಯದ ವೇಳೆ ತಿಮ್ಮಪ್ಪನಿಗೆ ವಿಶೇಷ ಪೂಜೆ, ಹೋಮ, ಹವನ, ಧಾರ್ಮಿಕ ಕಾರ್ಯಕ್ರಮಗಳ ಸಾಗಲಿವೆ. ಆದ್ದರಿಂದ ಆಗಸ್ಟ್ 12ರಿಂದ 16ರ ತನಕ ಆಸ್ತಿಕರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಸಿಗುವುದು ಕಷ್ಟವಾಗಿದೆ.

ಮಹೋತ್ಸವಕ್ಕೆ ಮುಹೂರ್ತ ನಿಗದಿ

ಅಷ್ಟ ಬಂಧನ ಬಾಲಾಲಯ ಮಹಾ ಸಂಪ್ರೋಕ್ಷಣಂ ಮಹೋತ್ಸವಕ್ಕೆ ಮುಹೂರ್ತ ನಿಗದಿಯಾಗಿದ್ದು, ಆಗಸ್ಟ್ 16ರಂದು ಬೆಳಗ್ಗೆ 10:16 ರಿಂದ 12ರ ವರೆಗೆ ಜರುಗುವ ತುಲಾ ಲಘ್ನದಲ್ಲಿ ದೇವಸ್ಥಾನದ ಒಳಗಿರುವ ಪರಕಮಣಿ ಹಳೇ ಕಲ್ಯಾಣ ಮಂಟಪದಲ್ಲಿ ಮಹೋತ್ಸವ ನಡೆಯಲಿದೆ. ಈ ಶುಭ ಕಾರ್ಯವು ಮಂಡಲ (೪೮) ದಿನಗಳ ಕಾಲ ನಡೆಯಲಿದ್ದು, ನಾಣ್ಯಗಳ ಎಣಿಕೆ ಕಾರ್ಯದ ವೇಳಾಪಟ್ಟಿ ಬದಲಾಗಿದ್ದು, ಬೆಳಗ್ಗೆ 8ರಿಂದ 5ರ ಬದಲು ಮಧ್ಯಾಹ್ನ 2ರಿಂದ 11ರ ವರೆಗೆ ನಡೆಯಲಿದೆ. ಇದು ಜುಲೈ 20ರಿಂದ ಅನ್ವಯವಾಗಲಿದೆ. ವೆಂಕಟೇಶ್ವರ ದೇವಸ್ಥಾನದಲ್ಲಿ ಎಲ್ಲಾ ದೇಗುಲಗಳ ದೇವರ ಒಡವೆ, ದೇವತಾ ಮೂರ್ತಿ ಹೊಸ ರೂಪ ಪಡೆದುಕೊಳ್ಳಲಿವೆ.

ಮಹೋತ್ಸದ ಘಟನೆಗಳು

• ಆಗಸ್ಟ್ 15ರಂದು ಮುಖ್ಯ ಹಾಗೂ ಪರಿವಾರ ದೇವತಾ ಮೂರ್ತಿಗಳಿಗೆ ಮಹಾಶಾಂತಿ ತಿರುಮಂಜನಮ್ ಪೂಜೆ ನೆರವೇರಲಿದೆ.

• ಆಗಸ್ಟ್ 17ರಿಂದ ಅಕ್ಟೋಬರ್ 3ರ ವರೆಗೆ 48 ದಿನಗಳ ಕಾಲ ಮಂಡಲ ಮಹಾಭಿಷೇಕ ಜರುಗಲಿದೆ. ಈ ಅವಧಿಯಲ್ಲಿ ಯಾರಿಗೂ ಪ್ರವೇಶವಿಲ್ಲ. ದೇವಗುಲದ ಸಿಬ್ಬಂದಿಗೆ ರಾಮುಲವರಿ ಮೆಧಾ ವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿದೆ.

• ಟಿಟಿಡಿಯು ಆಗಸ್ಟ್ 12ರಿಂದ 16ರ ವರೆಗೆ ವಿವಿಧ ಪೂಜೆ, ಸೇವೆ ಕಾರ್ಯವನ್ನು ರದ್ದು ಪಡಿಸಲಾಹಿದೆ.

• ಆಗಸ್ಟ್ 11ರಿಂದ 12ರ ತನಕ ಬೆಳಗ್ಗೆ ಸೇವೆ ಸಲ್ಲಿಸುವ ಭಕ್ತರಿಗೆ ತೋಮಲ ಮತ್ತು ಅರ್ಚನೆ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ.

• ಆಗಸ್ಟ್ 11ರಿಂದ 12ರ ತನಕ ವಿಐಪಿ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಪ್ರೋಟೋಕಾಲ್ ವಿಐಪಿಗಳಿಗೆ ಮಾತ್ರ ದರ್ಶನ ಭಾಗ್ಯ ಲಭಿಸುತ್ತದೆ.

• ಆಗಸ್ಟ್ 13ರಿಂದ 16ರ ವರೆಗೆ ಕೆಲವೇ ಭಕ್ತರಿಗೆ ಮಾತ್ರ ತಿಮ್ಮಪ್ಪನ ಭಾಗ್ಯ. 30ರಿಂದ 35 ಸಾವಿರ ಭಕ್ತರಿಗೆ ಅವಕಾಶ ಲಭಿಸಲಿದೆ.

ಸುದ್ದಿದಿನ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version