ದಿನದ ಸುದ್ದಿ
16 ಶಾಸಕರನ್ನ ಅಮಾನತು ಮಾಡುವಂತೆ ಶಿವಸೇನೆ ಮುಖಂಡನಿಂದ ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಕೆ.!
ಸುದ್ದಿದಿನ,ಮುಂಬೈ: ಮಾಜಿ ಸಿಎಂ ಉದ್ದವ್ ಠಾಕ್ರೆ ನೇತೃತ್ವದ ಎನ್.ಸಿ.ಪಿ, ಕಾಂಗ್ರೆಸ್- ಶಿವಸೇನೆ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಹಿತ 16 ಮಂದಿ ಶಾಸಕರನ್ನು ಅಮಾನತು ಮಾಡುವಂತೆ ಕೋರಿ ಶಿವಸೇನೆ ಪಕ್ಷದ ಮುಖಂಡರೊಬ್ಬರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಶಿವಸೇನೆಯ ಮುಖ್ಯ ಸಚೇತಕ ಸುನಿಲ್ ಪ್ರಭು ಅವರು ಶುಕ್ರವಾರ ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಶಿಂಧೆ ಮತ್ತು ಇತರ ಶಾಸಕರಿಗೆ ವಿಧಾನಸಭೆ ಪ್ರವೇಶಕ್ಕೆ ನಿರ್ಬಂಧ ಹೇರಬೇಕು ಎಂದವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243