ದಿನದ ಸುದ್ದಿ
ಇಂದಿನಿಂದ ರಾಜ್ಯದ್ಯಂತ ಹೊಟೇಲ್ ,ಬಾರ್, ಪಬ್ ಗಳಲ್ಲಿ ತಂಬಾಕು ನಿಷೇಧ : ಸಚಿವ ಯು.ಟಿ.ಖಾದರ್
ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ತಂಬಾಕು ನಿಯಂತ್ರಣ ಹಾಗು ಪರಿಸರ ಮಾಲಿನ್ಯ ತಡೆ ಚರ್ಚೆಯಲ್ಲಿ ಅಮೇರಿಕಾದ ಬರಾಕ್ ಒಬಾಮ್ ಜೊತೆ ಇದ್ದ ಆರೋಗ್ಯ ವಿಭಾಗದ ಜನರಲ್ ಕೌನ್ಸಿಲರ್ ರಜೀನಾ ಬೆಂಜಮಿನ್ ಇಂದು ಭಾಗಿಯಾಗಿದ್ದರು. ಅಮೇರಿಕಾದಲ್ಲಿ ಒಬಮಾ ಕೇರ್ ಜಾರಿಗ ತಂದ ಕೀರ್ತಿ ರಜಿನಾ ಅವರದ್ದಾಗಿದೆ ಎಂದು ಸಚಿವ ಯು.ಟಿ. ಖಾದರ್ ಬೆಂಗಳೂರಿನಲ್ಲಿ ಇಂದು ಹೇಳಿದ್ದಾರೆ.
ಇವತ್ತಿನಿಂದ ರಾಜ್ಯದ್ಯಂತ ಹೊಟೇಲ್ ,ಬಾರ್, ಪಬ್ ಗಳಲ್ಲಿ ತಂಬಾಕು ನಿಷೇಧ ಮಾಡಲಾಗಿದೆ.
ಇದುವರೆಗೂ ಬಿಬಿಎಮ್‌ಪಿ ವ್ಯಾಪ್ತಿಯಲ್ಲಿ ಮಾತ್ರ ಜಾರಿಗೆ ಇತ್ತು, ಇನ್ಮುಂದೆ ರಾಜ್ಯದ್ಯಂತ ಎಲ್ಲ ಕಾರ್ಪರೇಷನ್ ಹಾಗು ನಗರಗಳ ವ್ಯಾಪ್ತಿಯಲ್ಲಿ ಜಾರಿಯಾಗಲಿದೆ.ಪೌರಾಡಳಿತ ಇಲಾಖೆಯ ಮೂಲಕ ಆದೇಶ ಜಾರಿ ಮಾಡುತ್ತೇವೆ ಎಂದಿದ್ದಾರೆ.
ನಿಯಮ ಉಲ್ಲಂಘಿಸಿದರೆ ಪಬ್ ಹಾಗು ಬಾರ್ ಗಳ ಲೈಸೆನ್ಸ್ ಕ್ಯಾನ್ಸಲ್ ಮಾಡುತ್ತೇವೆ.
ಅಷ್ಟೇ ಅಲ್ಲ ವಿದೇಶದಿಂದ ತರುವ ತಂಬಾಕು ಹಾಗು ಮದ್ಯದ ಮೇಲೆ ಸುಂಕ ವಿನಾಯಿತಿ ಇದೆ.
ಇಂತಹ ವಿನಾಯಿತಿಯನ್ನು ತೆಗೆದು ಹಾಕುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯಲಿದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401