ಕ್ರೀಡೆ

ಐಪಿಎಲ್ ಸುದ್ದಿ

Published

on

ಸುದ್ದಿದಿನ ಡೆಸ್ಕ್ : ಮುಂಬೈನಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಕ್ರ್ರಿಕೆಟ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ18 ರನ್ ಗಳಿಂದ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಸೋಲಿಸಿದೆ.

ಇದರೊಂದಿಗೆ ಟೂರ್ನಿಯಲ್ಲಿ 5ನೇ ಜಯ ದಾಖಲಿಸಿದ ಬೆಂಗಳೂರು ತಂಡ ಒಟ್ಟು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. 181 ರನ್ ಗುರಿ ಬೆನ್ನಟ್ಟಿದ ಲಖನೌ ತಂಡ ನಿಗದಿತ 20ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163ರನ್ ಕಲೆಹಾಕಲಷ್ಟೇ ಶಕ್ತಗೊಂಡು ಸೋಲೊಪ್ಪಿತು, ಲಖನೌ ಪರ ಕೃಣಾಲ್ ಪಾಂಡ್ಯ 42ಮತ್ತು ನಾಯಕ ಕೆ.ಎಲ್. ರಾಹುಲ್ 30 ಗರಿಷ್ಠ ರನ್ ಕಲೆಹಾಕಿದರು.

ಬೆಂಗಳೂರು ತಂಡದ ಪರ ಜೋಶ್ ಹೇಜಲ್ ವುಡ್25 ರನ್ ಗಳಿಗೆ 4ವಿಕೆಟ್ ಉರುಳಿಸಿದರೆ, ಹರ್ಷಲ್ ಪಟೇಲ್ 46ರನ್ ನೀಡಿ 2 ವಿಕೆಟ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್‌ಗೆ ಅವಕಾಶ ಪಡೆದ ಬೆಂಗಳೂರು ತಂಡ ನಾಯಕ ಫಾಫ್ ಡು ಪ್ಲೆಸಿಸಿ ಅವರ 96 ರನ್ ಗಳ ಹೋರಾಟದ ಫಲವಾಗಿ 6 ವಿಕೆಟ್ ಗಳಿಗೆ 181ರನ್ ಗಳಿಸಿತು.

ಲಖನೌ ತಂಡದ ಪರ ದುಷ್ಮಂತ ಚಾಮೀರ ಮತ್ತು ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಪಡೆದರು. ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪರಸ್ಪರ ಎದುರಾಗಲಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version