ದಿನದ ಸುದ್ದಿ

ಇಂದು ರಾಷ್ಟ್ರೀಯ ಓದುವಿಕೆ ದಿನ

Published

on

ಸುದ್ದಿದಿನ ಡೆಸ್ಕ್ : ಇಂದು ರಾಷ್ಟ್ರೀಯ ಓದುವಿಕೆ ದಿನ. ಕೇರಳದ ಗ್ರಂಥಾಲಯ ಮತ್ತು ಸಾಕ್ಷರತಾ ಆಂದೋಲನದ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಪಿ. ಎನ್. ಪಣಿಕ್ಕರ್ ಅವರ ಗೌರವಾರ್ಥ ಈ ದಿನವನ್ನು ಆಚರಿಸಲಾಗುತ್ತದೆ.

ಒಂದು ತಿಂಗಳ ಅವಧಿಯ ಡಿಜಿಟಲ್ ರೀಡಿಂಗ್ ಆಚರಣೆಗಳ ಆರಂಭವನ್ನು ಇದು ಸೂಚಿಸುತ್ತದೆ. 1996ರ ಜೂನ್ 19ರಂದು ಕೇರಳ ಸರ್ಕಾರ, ಹಾಗೂ ಪಿ. ಎನ್. ಪಣಿಕ್ಕರ್ ಪ್ರತಿಷ್ಠಾನದ ಸಹಯೋಗದೊಂದಿಗೆ ಪ್ರಾರಂಭವಾದ ರಾಷ್ಟ್ರೀಯ ಓದುವಿಕೆ ದಿನ, ರಾಜ್ಯದಲ್ಲಿ ಸಾಕ್ಷರತೆ ಮತ್ತು ಓದುವ ಸಂಸ್ಕೃತಿ ಉತ್ತೇಜಿಸುವ ಒಂದು ಸಾಮೂಹಿಕ ಆಂದೋಲನವಾಗಿ ರೂಪುಗೊಂಡಿತು.

2017ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿಯಲ್ಲಿ ರಾಷ್ಟ್ರೀಯ ಓದುವಿಕೆ/ಡಿಜಿಟಲ್ ಓದುವಿಕೆ ತಿಂಗಳನ್ನು ಪ್ರಾರಂಭಿಸಿದರು ಹಾಗೂ ’ಓದಿರಿ ಮತ್ತು ಬೆಳೆಯಿರಿ’ ಎಂಬ ಸಂದೇಶವನ್ನು ಪ್ರಚುರ ಪಡಿಸುವಂತೆ ದೇಶದ ಜನತೆಗೆ ಕರೆ ನೀಡಿದ್ದರು. ತಿಂಗಳ ಅವಧಿಯ ಈ ಆಚರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ನೀತಿ ಆಯೋಗ, ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ, ಪಣಿಕ್ಕರ್ ಪ್ರತಿಷ್ಠಾನ ಹಾಗೂ ಇತರ ಪಾಲುದಾರರ ಸಹಯೋಗದೊಂದಿಗೆ, ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version