ದಿನದ ಸುದ್ದಿ
ಇಂದು ವಿಶ್ವ ತಂಬಾಕು ರಹಿತ ದಿನ
ಸುದ್ದಿದಿನ ಡೆಸ್ಕ್ : ಇಂದು ವಿಶ್ವ ತಂಬಾಕು ರಹಿತ ದಿನ. ಪ್ರಸಕ್ತ ವರ್ಷದ ಆಚರಣೆಯ ಧ್ಯೇಯ, ’ಪರಿಸರ ಸಂರಕ್ಷಿಸೋಣ’ ಹಾಗೂ ’ತಂಬಾಕು ಪರಿಸರಕ್ಕೆ ಹೇಗೆ ಹಾನಿ ಉಂಟುಮಾಡುತ್ತದೆ ಎಂದು ಜನಜಾಗೃತಿ ಮೂಡಿಸೋಣ’ ಎಂಬುದಾಗಿದೆ.
ಭಾರತದ ಸಲ್ಲಿಸಿರುವ ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ ವರದಿ ಪ್ರಕಾರ, 15 ವರ್ಷ ಮೇಲ್ಪಟ್ಟ, 26 ಕೋಟಿ 70 ಲಕ್ಷ ಜನರು ಅಂದರೆ, ಶೇಕಡ 29ರಷ್ಟು ವಯಸ್ಕರು ತಂಬಾಕು ಸೇವನೆ ಮಾಡುತ್ತಿದ್ದಾರೆ. ತಂಬಾಕು ಸೇವನೆಯಿಂದ ಉಂಟಾಗುವ ಸಾವು-ನೋವು ಹಾಗೂ ಕಾಯಿಲೆಯ ಚಿಕಿತ್ಸಾ ವೆಚ್ಚ, ವರ್ಷವೊಂದಕ್ಕೆ, ಒಂದು ಲಕ್ಷದ 77 ಸಾವಿರದ 300 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243