ದಿನದ ಸುದ್ದಿ

ದಾವಣಗೆರೆ | ಪೋಲಿಸ್ ಪೇದೆ ಸೇರಿದಂತೆ ಹೊಸ 3 ಕೇಸ್ ಪತ್ತೆ : 82 ಆಕ್ಟೀವ್ ಕೇಸ್

Published

on

ಸುದ್ದಿದಿನ,ದಾವಣಗೆರೆ : ನಗರದಲ್ಲಿ ಮತ್ತೆ ಮೂರು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 88 ಕ್ಕೆ ಏರಿದೆ. ಕಂಟೇನ್ಮೆಂಟ್ ಏರಿಯದಲ್ಲಿ ಕೆಲಸ ಮಾಡಿದ್ದ ಪೆ.ನಂ 975 (34) ವರ್ಷದ ಟ್ರಾಫಿಕ್ ಪೇದೆಗೆ ಸೋಂಕು ತಗುಲಿದೆ.

ಪೇ.ನಂ 976 ಬೆಳ್ಳೂಳ್ಳಿ ವ್ಯಾಪಾರಿ ಐಎಲ್ ಐ ಕೇಸ್ ನಿಂದ ಸೋಂಕು ತಗುಲಿದೆ. ದಾವಣಗೆರೆ ರೈತರ ಬೀದಿಯ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಪೆ. 852 ಸಂಪರ್ಕದಿಂದ ಪೆ 960 ವ್ಯಕ್ತಿಗೆ (40) ಸೋಂಕು ತಗುಲಿದೆ. ಸೋಂಕಿತ ವ್ಯಕ್ತಿ ಕಂಟೆನ್ಮೆಂಟ್ ಝೋನ್ ಜಾಲಿನಗರದವನು. ಈ ಮೂವರಿಂದ ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಎರಡು ಗುಣ ಮುಖ ನಾಲ್ಕು ಸಾವು ಹಾಗೂ ಆಕ್ಟಿವ್ ಕೇಸ್ 82 ಇವೆ.

ಕೋವಿಡ್19: 2020ರ 13ಮೇ ಸಂಜೆ 5 ಗಂಟೆಯಿಂದ 14ಮೇ ಬೆಳಗ್ಗೆ 12 ಗಂಟೆ ಒಳಗಿನ ವರದಿ

  • ಒಟ್ಟು ಪ್ರಕರಣಗಳು: 88
  • ಮೃತಪಟ್ಟವರು: 04
  • ಗುಣಮುಖರಾದವರು: 02
  • ಹೊಸ ಪ್ರಕರಣಗಳು: 03
  • ಆ್ಯಕ್ಟಿವ್ ಕೇಸ್: 82

ಇತರೆ ಮಾಹಿತಿ

ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version