ದಿನದ ಸುದ್ದಿ

ಮಹಿಳಾ ಸಾಂತ್ವನ ಕೇಂದ್ರ ಮುಚ್ಚಬೇಡಿ : ಸರ್ಕಾರಕ್ಕೆ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹ

Published

on

ಸುದ್ದಿದಿನ, ಹೂವಿನ ಹಡಗಲಿ : ವರಕ್ಷಿದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಕ್ಕೋಳಗಾದ ಮಹಿಳೆಯರಿಗೆ ನೆರವು ಒದಗಿಸುವ ಉದ್ದೇಶದಿಂದ ಅಂದಿನ ಕಾಂಗ್ರೆಸ್ ಸರ್ಕಾರ ರಾಜ್ಯದಾದ್ಯಂತ ಸ್ಥಾಪಿಸಿದ್ದ “ಮಹಿಳಾ ಸಾಂತ್ವನ” ಕೇಂದ್ರಗಳನ್ನು ಈಗ ಬಿಜೆಪಿ ಸರಕಾರ ಮುಚ್ಚಲು ಆದೇಶಿಸಿದ್ದು ಈ ನಿರ್ಧಾರ ವಾಪಸು ಪಡೆಯಲು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ತನ್ನ ಗುಪ್ತ ಅಜೆಂಡಾದ ಭಾಗವಾಗಿ ಮತ್ತೆ ಮಹಿಳೆಯರನ್ನು ಮನೆಯಲ್ಲಿರಿಸಲು ಸ್ವಾತಂತ್ರ್ಯ ಕಸಿಯಲು ಮೊದಲಿನಂತೆ ದೌರ್ಜನ್ಯದ ವಿರುದ್ಧ ಬಾಯೆತ್ತದಂತೆ ಮಾಡಲು ಕೇಂದ್ರ ಸರಕಾರದ ಯಾವುದೇ ಯೋಜನೆ ಜಾರಿ ನೆಪಹೇಳಿ ಮುಚ್ಚುತ್ತಿದೆ ಎಂದರು.

ಸ್ವಯಂ ಸೇವಾ ಸಂಸ್ಥೆಗಳ ಮೂಲಕ ರಾಜ್ಯದಲ್ಲಿ ರಾಜ್ಯದಲ್ಲಿ 196 ಸಾಂತ್ವನ ಕೇಂದ್ರಗಳ ಮುಚ್ಚುವಿಕೆಯಿಂದ ಸಾವಿರಾರು ನೌಕರರು ಮತ್ತು ಅವರ ಅವಲಂಬಿತರು ಬೀದಿಗೆ ಬರುವಂತಾಗಿದೆ ಅದೆಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದ ಕೋಟ್ಯಾಂತರ ಹೆಣ್ಣುಮಕ್ಕಳ ನ್ಯಾಯಕೇಂದ್ರಗಳು ಮುಚ್ಚಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿಗೆ ಮಹಿಳಾ ಸಮಾನತೆ ಲಿಂಗ ಸಮಾನತೆ ಸಮಾನ ಪ್ರಾತಿನಿಧ್ಯ ನೀಡುವ ಬದ್ಧತೆ ಇಂತಹ ಕಾರ್ಯಕ್ರಮಗಳನ್ನು ಜಾರಿ ತರುವ ಮೂಲಕ ಪ್ರದರ್ಶಿಸಿದರೆ ಬಿಜೆಪಿ ಮಹಿಳಾ ವಿರೋಧಿ ನೀತಿಯನ್ನು ಈ ರೀತಿ ಸಾಂತ್ವನ ಕೇಂದ್ರ ಮುಚ್ಚುವ ಮೂಲಕ ತೋರುತ್ತಿದೆ ಎಂದು ಕಿಡಿಕಾರಿದರು.

ಕರ್ನಾಟಕದ ಕೋಟ್ಯಾಂತರ ಮಹಿಳೆಯರ ಹಕ್ಕುಗಳಿಗೆ ಗೌರವ ಸಿಗಬೇಕಾದರೆ ಮತ್ತೆ ಸಾಂತ್ವನ ಕೇಂದ್ರಗಳು ಸ್ಥಾಪನೆಗೊಳ್ಳಬೇಕು. ಮಹಿಳೆಯರ ಬದುಕಲ್ಲಿ ಶಾಂತಿ ನೆಮ್ಮದಿ ಭದ್ರತೆ ದೊರಕಲು ಸಾಂತ್ವನ ಕೇಂದ್ರಗಳು ಮತ್ತೆ ಆರಂಭಗೊಳ್ಳಬೇಕು ಎಂದು ಪತ್ರೇಶ್ ಒತ್ತಾಯಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version