ದಿನದ ಸುದ್ದಿ

‘ಕೈ’ ಜೋಡಿಸಿದ ಶತ್ರುಘ್ನ ಸಿನ್ಹಾ‌ ‘ಪ್ರಜಾಪ್ರಭುತ್ವ ಚಿರಾಯುವಾಗಲಿ’ ಅಂದ್ರು..!

Published

on

ಸುದ್ದಿದಿನ ಡೆಸ್ಕ್ : ಬದಲಾವಣೆ ಗಾಳಿ ಬಲವಾಗಿ ಬೀಸುತ್ತಿದೆ.ಮೋದಿ ನಿರ್ಗಮನಕ್ಕೆ ದೇಶ ಕಾಯುತ್ತಿದೆ. ಬಿಜೆಪಿಯನ್ನು ತೊರೆಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಭರವಸೆಯ ನಾಯಕ ರಾಹುಲ್ ಗಾಂಧಿ ಯವರ ನಾಯಕತ್ವ ಜಗವೇ ಮೆಚ್ಚುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಇಂದು ಕಾಂಗ್ರೆಸ್ ಸೇರ್ಪಡೆಗೊಂಡರು. ಬಿಜೆಪಿ ಸಂಸ್ಥಾಪನಾ ದಿನವಾದ ಇಂದು (ಏಪ್ರಿಲ್ 6) ಬಿಜೆಪಿ ತೊರೆದು ಕಾಂಗ್ರಸ್ ಗೆ ಕೈ ಜೋಡಿಸಿರುವ ಅವರು ” ನಾನು ತುಂಬಾ ದುಃಖ ಮತ್ತು ನೋವಿನಿಂದ ನನ್ನ ಹಳೆಯ ಪಕ್ಷಕ್ಕೆ ವಿದಾಯವನ್ನು ಹೇಳುತ್ತಿದ್ದೇನೆ. ಇಂದು ಆಪಕ್ಷದ ಸಂಸ್ಥಾಪನಾ ದಿನವಾಗಿರುವುದರಿಂದ ನನ್ನವರೇ ಆಗಿದ್ದ ಪಕ್ಷದ ಯಾರಿಗೂ ನಾನು ನೋಯಿಸುವುದಿಲ್ಲ.

ನಾನು ಈಗ ಸೇರ್ಪಡೆಯಾಗುತ್ತಿರುವ ಮಹಾನ್ ರಾಷ್ಟ್ರೀಯ ಪಕ್ಷವು ನನಗೆ, ಜನತೆಗೆ, ದೇಶಕ್ಕೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಪ್ರಗತಿ, ಸಮಗ್ರತೆ, ದೇಶದ ಐಕ್ಯತೆ, ಅಭಿವೃದ್ಧಿಯನ್ನು ಸಾಧಿಸಲು ಪಕ್ಷವು ಒಳ್ಳೆಯ ಅವಕಾಶಗಳನ್ನು ನೀಡುತ್ತದೆಂಬ ವಿಶ್ವಾಸವಿಟ್ಟಿದ್ದೇನೆ.

ದೇಶದ ಮಹಾನ್ಯ ವ್ಯಕ್ತಿಗಳಾದ ಮಹಾತ್ಮ ಗಾಂಧೀಜಿ, ನೆಹರೂ, ಪಟೇಲ್ ರಂತಹ ದಿಗ್ಗಜರು ಕಟ್ಟಿದ ಪಕ್ಷವಿದಾಗಿದೆ. ಸಮರ್ಥರು, ಡೈನಮಿಕ್, ಅನುಭವಿಯಾಗಿರುವ ರಾಹುಲ್ ಗಾಂಧಿಯವರು ಇಂದಿನ ಮತ್ತು ಮುಂದಿನ ಯಶಸ್ವೀ ನಾಯಕತ್ವದ ಮುಖಲಕ್ಷಣವಿರುವ ಇವರ ಅಧ್ಯಕ್ಷತೆಯಲ್ಲಿ ಪಕ್ಷವು ಸರಿಯಾದ ಮಾರ್ಗದಲ್ಲಿ ನಡೆಯುತ್ತದೆ ಎಂಬ ಸಂಪೂರ್ಣ ಭರವಸೆ ನನಗಿದೆ.

ಪ್ರಜಾಪ್ರಭುತ್ವವು ಚಿರಾಯುವಾಗಲಿ ಹಾಗೂ ಕಾಂಗ್ರೆಸ್ ಪಕ್ಷ ಮತ್ತು ಆರ್ ಜೆ ಡಿಯು ಲಾಲು ಮತ್ತು ತೇಜಸ್ವಿ ಮೈತ್ರಿಗೆ ಜಯವಾಗಲಿ ಮಹಾನ್ ಭಾರತ ಚಿರಾಯುವಾಗಲಿ, ಜೈ ಹಿಂದ್” ಎಂದು ತಮ್ಮ ಸರಣಿ ಟ್ವೀಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version