ರಾಜಕೀಯ
ಇಂದು ವೈ.ಎಸ್. ಜಗನ್ ಮೋಹನ್ ರೆಡ್ಡಿ ನೂತನ ಸಚಿವರ ಪ್ರಮಾಣ ವಚನ
ಸುದ್ದಿದಿನ ಡೆಸ್ಕ್ : ಆಂಧ್ರಪ್ರದೇಶದಲ್ಲಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ನೂತನ ಸಚಿವ ಸಂಪುಟದ ಸದಸ್ಯರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸೆಕ್ರೇಟರಿಯೇಟ್ ಸಮೀಪದ ಆವರಣದಲ್ಲಿ ಬೆಳಗ್ಗೆ 11.31ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಯಾಗಿದೆ.
ಸಂಪುಟದ ಎಲ್ಲಾ 24 ಸಚಿವರು ಕಳೆದ ಗುರುವಾರ ರಾಜೀನಾಮೆ ನೀಡಿದ್ದರು. ನಂತರ ಶನಿವಾರ ಈ ರಾಜೀನಾಮೆ ಪತ್ರಗಳನ್ನು ಆಂಧ್ರಪ್ರದೇಶ ರಾಜ್ಯಪಾಲ ಭೂಷಣ ಹರಿಚನ್ ಅವರ ಕಚೇರಿಗೆ ಕಳುಹಿಸಲಾಗಿತ್ತು. ಬಳಿಕ ರಾಜ್ಯಪಾಲರು ಎಲ್ಲಾ ಸಚಿವರುಗಳ ರಾಜೀನಾಮೆ ಅಂಗೀಕರಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243