ದಿನದ ಸುದ್ದಿ

ಹವಾಮಾನ ವರದಿ

Published

on

ಸುದ್ದಿದಿನ ಡೆಸ್ಕ್ : ದಕ್ಷಿಣ ಒಳನಾಡಿನ ಕೆಲವು ಕಡೆ ಮಳೆಯಾಗಿದೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ 7, ಬೆಂಗಳೂರು ನಗರ 5, ಪೊನ್ನಂ ಪೇಟೆ, ಕೆ.ಆರ್ ನಗರ, ಕೃಷ್ಣರಾಜ ಪೇಟೆ, ಹೊನಕೆರೆ, ಮಳವಳ್ಳಿ, ರಾಮನಗರ 3, ಬೆಳ್ಳೂರು, ಹೆಸರಘಟ್ಟ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲ 2, ಶ್ರವಣ ಬೆಳಗೊಳ, ಹುಣಸೂರು, ಮೈಸೂರು, ಕೋಲಾರ, ತುರುವೆಕೆರೆಯಲ್ಲಿ ತಲಾ 1 ಸೆಂ. ಮೀ ಮಳೆಯಾಗಿದೆ.

ಕಲಬುರಗಿಯಲ್ಲಿ ದಿನದ ಗರಿಷ್ಠ 43.5ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಮುನ್ಸೂಚನೆಯಂತೆ ಮುಂದಿನ 24ಗಂಟೆಗಳಲ್ಲಿ ಒಳನಾಡು ಹಾಗೂ ಕರಾವಳಿಯ ಕೆಲ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನ ಸುತ್ತಮುತ್ತ ಸಾಮಾನ್ಯ ಮೋಡ ಕವಿದ ವಾತಾವರಣ. ಕೆಲವು ಕಡೆ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ. ಗರಿಷ್ಠ 33 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಷಿಯಸ್ ತಾಪಮಾನ ಸಂಭವ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version