ದಿನದ ಸುದ್ದಿ

ನಾಳೆ ಡಾ. ರಾಜ್‍ಕುಮಾರ್ ಜಯಂತಿ

Published

on

ಸುದ್ದಿದಿನ,ದಾವಣಗೆರೆ : ವರನಟ, ಪದ್ಮಭೂಷಣ ಡಾ. ರಾಜ್‍ಕುಮಾರ್ ರವರ ಜಯಂತಿಯನ್ನು ಏ.24 ರಂದು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್‍ನಲ್ಲಿ ಏ.24 ರ ಬೆಳಗ್ಗೆ 10.30 ಕ್ಕೆ ಜಯಂತಿ ಕಾರ್ಯಕ್ರಮವನ್ನು ಡಾ.ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಆಚರಿಸಲಾಗುವುದು.

ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿ ಸಿಬ್ಬಂದಿಗಳು, ಡಾ.ರಾಜ್ ಅಭಿಮಾನಿಗಳು, ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಬೇಕೆಂದು ವಾರ್ರ್ತಾಧಿಕಾರಿ ಅಶೋಕ್‍ಕುಮಾರ್.ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version