ದಿನದ ಸುದ್ದಿ

ನಾಳೆ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳ

Published

on

ಸುದ್ದಿದಿನ ಡೆಸ್ಕ್ :ದೇಶದ 700ಕ್ಕೂ ಹೆಚ್ಚು ಕಡೆಗಳಲ್ಲಿ ನಾಳೆ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳ ಆಯೋಜಿಸಲಾಗಿದೆ. ತರಬೇತಿ ಮಹಾ ನಿರ್ದೇಶನಾಲಯದ ಸಹಯೋಗದಲ್ಲಿ ಸ್ಕಿಲ್ ಇಂಡಿಯಾದಿಂದ ಈ ಮೇಳ ಏರ್ಪಡಿಸಲಾಗಿದೆ.

ಸುಮಾರು 1 ಲಕ್ಷಕ್ಕೂ ಹೆಚ್ಚು ಶಿಶಿಕ್ಷುಗಳನ್ನು ಆಯ್ಕೆ ಮಾಡಿ ಅವರ ಪ್ರತಿಭೆಗೆ ಅನುಗುಣವಾಗಿ ಉದ್ಯೋಗ ನೀಡುವ, ಅವರಿಗೆ ಮತ್ತಷ್ಟು ತರಬೇತಿ ಒದಗಿಸುವ ಉದ್ದೇಶದಿಂದ ಈ ಮೇಳ ಆಯೋಜನೆ ಮಾಡಲಾಗಿದೆ.

ದೇಶಾದ್ಯಂತ 4 ಸಾವಿರಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸುತ್ತಿದ್ದು, ವಿದ್ಯುತ್, ಚಿಲ್ಲರೆ ವಹಿವಾಟು, ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ ವಿಭಾಗ, ಆಟೋಮೋಟಿವ್ ಒಳಗೊಂಡಂತೆ 30ಕ್ಕೂ ಹೆಚ್ಚು ವಲಯಗಳಲ್ಲಿ ವೆಲ್ಡರ್, ಎಲೆಕ್ಟ್ರಿಷಿಯನ್, ಹೌಸ್ ಕೀಪರ್, ಬ್ಯೂಟೀಷಿಯನ್, ಮೆಕ್ಯಾನಿಕಲ್ ಸೇರಿದಂತೆ 500ಕ್ಕೂ ಹೆಚ್ಚು ಉದ್ಯೋಗ ಕ್ಷೇತ್ರಗಳಲ್ಲಿ ಪ್ರತಿಭೆಗಳನ್ನು ಗುರುತಿಸಲಾಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version