ಲೈಫ್ ಸ್ಟೈಲ್
ಬೇಲಿಯಲ್ಲಿ ಬೆಳೋ ತೊಂಡೆಕಾಯಿ ಮಹಿಮೆ ನಿಮಗೆ ಗೊತ್ತಾ?
ಸುದ್ದಿದಿನ ಡೆಸ್ಕ್: ತೊಂಡೆಕಾಯಿ ಸದಾ ಲಭ್ಯವಿರುವ ತರಕಾರಿ. ಇದನ್ನು ಪಲ್ಯ, ಸಾರು, ಹಿಂಡಿ ವಿವಿಧ ಬಗೆಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಬಹುದು. ತೊಂಡೆಕಾಯಿ ಹೊಲ, ಮನೆ ಹಿಂದೆ, ರಸ್ತೆ ಬದಿಯ ಬೇಲಿಗಳಲ್ಲಿ ಬೆಳೆಯಬಹುದಾದ ಕಾಯಿಪಲ್ಯಯಾಗಿದೆ. ಇದಿಷ್ಟೇ ಅಲ್ಲ ಇದರ ಉಪಯೋಗ. ತೊಂಡೆಕಾಯಿ ಔಷಧ ಗುಣ ಹೊಂದಿದ್ದು, ಚರ್ಮ ಮೃದುವಾಗಲು, ಕಜ್ಜೆಯಂತಹ ತುರಿಕೆ ಸಮಸ್ಯೆಗಳು ನಿವಾರಣೆಯಾಗಲು ಸಹಕಾರಿಯಾಗಿದೆ. ತೊಂಡೆಕಾಯಿ ಮತ್ತು ಅದರ ಎಲೆಗಳಿಂದ ತಯಾರಿಸಿ ಕೊಳ್ಳಬಹುದಾದ ಮನೆಮದ್ದುಗಳ ವಿವರ ಇಲ್ಲಿದೆ ಓದಿ…
- ತೊಂಡೆಕಾಯಿ ಎಲೆಯ ರಸ ಸೇವನೆ ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ತೊಂಡೆಕಾಯಿ ಎಲೆಯ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ ಮೂರು ಸಲ ಕುಡಿದರೆ ದೇಹದ ಹೆಚ್ಚಾಗುತ್ತಿರುವ ಉಷ್ಣತೆ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ.
ತೊಂಡೆಕಾಯಿ ಸೇವನೆಯಿಂದ ಚರ್ಮ ಒರಟಾಗುವುದನ್ನು ತಡೆಯಬಹುದು. ಬಿಸಿಲಿನಿಂದ ಮುಖವು ಬಾಡಿದಂತೆ, ಒಣಗಿದಂತಾಗುತ್ತದೆ. ಇದನ್ನು ತಪ್ಪಿಸಲು ಪ್ರತಿ ಎರಡು ಹಸಿ ತೊಂಡೆಕಾಯಿ ತಿಂದರೆ ಚರ್ಮ ಒಣಗಿದಂತಾಗುವುದನ್ನು ತಡೆಯಬಹುದು.
- ದೇಹದಲ್ಲಿ ಚರ್ಮ ಸಮಸ್ಯೆಗಳಾದ ಕಜ್ಜೆ, ಗಂದೆಗಳು ಉಂಟಾಗಿದ್ದರೆ ತೊಂಡೆಕಾಯಿಯಿಂದ ತಯಾರಿಸಿದ ಔಷಧ ರಾಮಬಾಣವಾಗಿ ಕೆಲಸ ಮಾಡುತ್ತದೆ. ದೇಹದಲ್ಲಿ ಉಂಟಾದ ಕಜ್ಜೆ, ಗಂದೆಗಳಾದ ಜಾಗದಲ್ಲಿ ತೊಂಡೆಕಾಯಿ ಜಜ್ಜಿ ಪೇಸ್ಟ್ ಮಾಡಿ ಗಂದೆ, ಕಜ್ಜೆಗಳು ವಾಸಿಯಾಗುತ್ತವೆ.
ಬೀಸಿಲು ಸೇರಿದಂತೆ ವಿವಿಧ ಕಾರಣಗಳಿಂದ ಕಣ್ಣಿನ ಉರಿ ಕಾಣಿಸಿಕೊಳ್ಳುವುದು ಕಡಿಮೆ ಆಗುತ್ತದೆ. ಒಂದು ಲೋಟ ನೀರಿಗೆ ತೊಂಡೆಕಾಯಿ ಎಲೆ ರಸ ಬೆರೆಸಿ ಕುಡಿದರೆ ಕಣ್ಣುರಿ ಬರುವುದು ಕಡಿಮೆಯಾಗುತ್ತದೆ.
- ತೊಂಡೆಕಾಯಿ ಬಳ್ಳಿಯ ಕಾಂಡದ ರಸ ಬೊಜ್ಜು ಕರಗಲು ಲಕ್ಷ್ಮಣ ರೇಖೆಯಾಗಿದೆ. ಆಸೆ ಪಟ್ಟು ತಿಂದು ಹೊಟ್ಟೆ ಬೆಳೆಸಿಕೊಂಡವರಿಗೆ ಬೊಜ್ಜು ಕರಗಿಸಲು ಕಷ್ಟ ಪಡುತ್ತಾರೆ. ಬೊಜ್ಜು ಕರಗಿಸಲು ಲಕ್ಷ್ಮಣ ರೇಖೆಯಾಗಿದೆ. ತೊಂಡೆಕಾಯಿ ಬಳ್ಳಿಯ ಕಾಂಡದ ಎರಡು ಚಮಚ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಕುಡಿದರೆ ಕುಡಿದರೆ ದೇಹದ ಅನಗತ್ಯ ಕೊಬ್ಬು ಕರಗುತ್ತದೆ.
ಸಂಧಿಗಳ ಸಮಸ್ಯೆಗಳಿಗೆ ತೊಂಡೆಕಾಯಿ ಎಲೆ ರಸ ನೋವು ನಿವಾರಕ ಶಕ್ತಿ ಹೊಂದಿದೆ. ಸಂದಿ ಊತ ಕಾಣಿಸಿಕೊಂಡ ಕಡೆಗೆ ತೊಂಡೆ ಬಳ್ಳಿಯ ಎಲೆಗಳನ್ನು ಬೇವಿನ ಎಣ್ಣೆಯಲ್ಲಿ ಚೆನ್ನಾಗಿ ನೆನೆಸಿ ಪೈಸ್ಟ್ ಮಾಡಿ ಊತ ಇರುವ ಜಾಗದಲ್ಲಿ ಲೇಪನ ಮಾಡಿದರೆ ಊತ ಕಡಿಮೆಯಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401