ದಿನದ ಸುದ್ದಿ
Bank Holidays: 2026ರ ಮೊದಲ ತಿಂಗಳಲ್ಲೇ ಸಾಲು ಸಾಲು ರಜೆ, ಕರ್ನಾಟಕದ ಬ್ಯಾಂಕ್ ಆಧಾರಿತ ರಜೆ ಎಷ್ಟು?
ಹೊಸ ವರ್ಷ ಪ್ರಾರಂಭವಾಗಿ ದಿನಗಣನೇ ಕಳೆದಿದ್ದು, ಮೊದಲ ತಿಂಗಳಲ್ಲೇ ಬ್ಯಾಂಕ್ ಸಂಬಂಧಿತ ಪ್ರಮುಖ ಕೆಲಸಗಳನ್ನು ನೀವು ಇಟ್ಟುಕೊಂಡಿದ್ದರೆ ಅದಕ್ಕೆ ಸ್ವಲ್ಪ ಬ್ರೇಕ್ ನೀಡಿ. ಯಾಕೆಂದರೆ, ಜನವರಿ ತಿಂಗಳಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳು ಸೇರಿ ಒಟ್ಟು 8 ರಜೆ (Bank Holidays) ಗಳಿವೆ.
ಕ್ಯಾಲೆಂಡರ್ ರಜೆಗಳೆಲ್ಲವೂ ಬ್ಯಾಂಕ್ ರಜಾದಿನವೇ (Bank Holidays)?
ಆರ್‍ಬಿಐ ಕ್ಯಾಲೆಂಡರ್ ಅನ್ವಯ ರಾಷ್ಟ್ರೀಯ ಮಟ್ಟದಲ್ಲಿ 16 ರಜೆಗಳಿದ್ದರೂ, ನಮ್ಮ ರಾಜ್ಯಕ್ಕೆ ಕೇವಲ 8 ರಜೆಗಳು ಮಾತ್ರ ಅನ್ವಯಿಸುತ್ತದೆ. ಉಳಿದ 23 ದಿನಗಳಲ್ಲಿ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಹಾಗಿದ್ದರೆ ಈ 8 ರಜೆ ದಿನಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಮಕ್ಕಳ ಹಕ್ಕುಗಳಿಗೆ ಶ್ರೀರಕ್ಷೆಯಾಗಿದೆ ಮಕ್ಕಳ ರಕ್ಷಣಾ ಆಯೋಗ : ಅಪರ್ಣಾ ಎಂ ಕೊಳ್ಳ
ಕರ್ನಾಟಕದ ಬ್ಯಾಂಕ್ ರಜಾದಿನಗಳ (Bank Holidays) ಪಟ್ಟಿ:
ಜನವರಿ 4: ಭಾನುವಾರದ ರಜೆ
ಜನವರಿ 10: 2ನೇ ಶನಿವಾರದ ರಜೆ
ಜನವರಿ 11: ಭಾನುವಾರದ ರಜೆ
ಜನವರಿ 15 (ಗುರುವಾರ): ಮಕರ ಸಂಕ್ರಾತಿ ಹಬ್ಬದ ರಜೆ
ಜನವರಿ 18: ಭಾನುವಾರದ ರಜೆ
ಜನವರಿ 24: 4ನೇ ಶನಿವಾರದ ರಜೆ
ಜನವರಿ 25: ಭಾನುವಾರದ ರಜೆ
ಜನವರಿ 26 (ಸೋಮವಾರ): ಗಣರಾಜ್ಯೋತ್ಸವ (ರಾಷ್ಟ್ರೀಯ ಹಬ್ಬ)
ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮಾಡಬೇಕಾದ ತುರ್ತು ಕೆಲಸಗಳಿದ್ದರೆ ಈ ರಜೆ ದಿನಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ದಿನಚರಿಯನ್ನು ಪಟ್ಟಿ ಮಾಡಿಕೊಳ್ಳಿ. ರಜೆ ದಿನ (Bank Holidays) ಗಳಲ್ಲಿಯೂ ಎಟಿಎಂ, ಯುಪಿಐ, ನೆಟ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರುತ್ತದೆ.