ದಿನದ ಸುದ್ದಿ

ಬಳ್ಳಾರಿ | ಬಗೆಹರಿಯದ ಟ್ರಾಫಿಕ್ ಸಮಸ್ಯೆ ; ಸಿಪಿಐ ಮೌನ

Published

on

~ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ಸುದ್ದಿದಿನಡೆಸ್ಕ್:ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಬೈಕ್, ಕಾರು ಅಪಘಾತಗಳಲ್ಲಿ 7 ಕ್ಕಿಂತ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ‌. ಆದರೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಟ್ರಾಫಿಕ್ ನಲ್ಲಿನ ಸಮಸ್ಯೆಯಿಂದಾಗಿ ಈ ಅಪಘಾತಗಳು ನಡೆಯುತ್ತಿವೆ. ಆದರೆ ದಂಡ ಹಾಕಲು ಮುಂದಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸ್ಥಳೀಯ ರಾಜಕೀಯ ನಾಯಕರ ಒತ್ತಡ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಎಸ್ಪಿಯಿಂದ ಪತ್ರಿಕಾ ಪ್ರಕಟಣೆ

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೋಭಾರಾಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲೆಯಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳಲ್ಲಿ ತಲೆಗೆ ತೀವ್ರಗಾಯಗಳಾಗಿ ಸಾವಿಗೀಡಾಗುರುತ್ತಿರುವುದು ಕಂಡುಬರುತ್ತಿದ್ದು, ಪ್ರತಿಯೊಬ್ಬ ಸಾರ್ವಜನಿಕರು ವಾಹನ ಚಲಾಯಿಸುವಾಗ ಸವಾರ ಮತ್ತು ಹಿಂಬದಿ ಸವಾರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.ವಾಹನ ಚಲಾಯಿಸುವ ತಮ್ಮ ಕುಟುಂಬದ ಎಲ್ಲಾ ಸದಸ್ಯರು, ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಡ್ಡಾಯವಾಗಿ ಐ.ಎಸ್.ಐ ಮಾರ್ಕ್ ಹೊಂದಿದ ಹೆಲ್ಮೆಟ್ ‌ಅನ್ನು ಧರಿಸಬೇಕು.

ಮುಖ್ಯವಾಗಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು.ಪ್ರಸ್ತುತ ಜಿಲ್ಲೆಯ ಸಾರ್ವಜನಿಕ ರಸ್ತೆಯಲ್ಲಿ ಪೊಲೀಸ್ ಇಲಾಖೆಯಿಂದ ಈ ಬಗ್ಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ಒಂದು ವೇಳೆ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನಿನನ್ವಯ ಪ್ರಕರಣ ದಾಖಲಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಕೆಲ ದಿನಗಳು ಮಾತ್ರ ಹೆಲ್ಮೆಟ್

ಬಳ್ಳಾರಿ ಜಿಲ್ಲೆಯಲ್ಲಿ ಕೆಲ ದಿನಗಳ ಕಾಲ ಮಾತ್ರ ಹೆಲ್ಮೆಟ್ ಹಾಕೋದು ಮತ್ತು ಬೇಸಿಗೆಯಲ್ಲಿ ಹೆಲ್ಮೆಟ್ ಜಾರಿ ಇಲ್ಲ, ಒಟ್ಟಾರೆಯಾಗಿ ಜನರು ತಮ್ಮ ಜೀವದ ಉಳಿವಿಗಾಗಿ ಹೆಲ್ಮೆಟ್ ಕಡ್ಡಾಯವಾಗಿ ಹಾಕಬೇಕು ಎನ್ನುವುದು ಸಾಮಾನ್ಯ ಅಂಶವಾಗಿದೆ. ಆದರೆ ಇಲ್ಲಿಯ ಹಿರಿಯ ರಾಜಕೀಯ ವ್ಯಕ್ತಿಗಳು ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಹೆಲ್ಮೆಟ್ ಬೇಡ ಎನ್ನುವ ಕಾರಣ ಬರೆದು ಅದನ್ನು ತಡೆಹಿಡಿದಿರುತ್ತಾರೆ. ಇನ್ನೊಂದು ಕಡೆ ಪೊಲೀಸ್ ಇಲಾಖೆ ಇಂದಿನಿಂದ ಹೆಲ್ಮೆಟ್ ಕಡ್ಡಾಯ ಅಂತಾರೆ.

ಜಿಲ್ಲಾಧಿಕಾರಿ ಕಚೇರಿಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೂ ಹೆಲ್ಮೆಟ್ ಹಾಕಲ್ಲ, ಯಾರಾದರೂ ಪೊಲೀಸರು ಅವರನ್ನ ನಿಲ್ಲಿಸಿದರೆ ನಾವು ಡಿಸಿ ಮತ್ತು ಎಸ್ಪಿ ಕಚೇರಿ ಸಿಬ್ಬಂದಿಗಳು ಎನ್ನುವ ಉತ್ತರ ನೀಡುತ್ತಾರೆ.
ರಾಜಕೀಯ ವ್ಯಕ್ತಿಗಳ ಹಿಂಬಾಲಕರು, ಆ ಸಂಘಟನೆ, ಈ ಸಂಘಟನೆ, ಗೃಹರಕ್ಷಕದಳ, ವಾರ್ತಾ ಇಲಾಖೆ, ಮಾಧ್ಯಮದವರು, ಶಿಕ್ಷಣ ಇಲಾಖೆ, ಎಸಿ ಕಚೇರಿ, ತಹಶಿಲ್ದಾರರ ಕಚೇರಿ, ಆರ್.ಟಿ.ಓ ಇಲಾಖೆ ಇನ್ನಿತರ ಇಲಾಖೆಗಳ ಹೆಸರು ಹೇಳಿಕೊಂಡು ಹೆಲ್ಮೆಟ್ ಹಾಕದೇ ದಂಡ ಕಟ್ಟದೇ ತಪ್ಪಿಸಿಕೊಳ್ಳುತ್ತಿರುವುದು ದುರಂತ.

ಇನ್ನು ಪೊಲೀಸ್ ಇಲಾಖೆಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಐ.ಎಸ್.ಐ ಮಾರ್ಕ್ ಇಲ್ಲದ ಹೆಲ್ಮೆಟ್ ಹಾಕಿಕೊಂಡು ಬೈಕ್ ಗಳನ್ನು ಚಾಲನೆ ಮಾಡುತ್ತಾರೆ. ಜನರಿಗೆ ಮಾತ್ರ ಐ.ಎಸ್.ಐ ಹೆಲ್ಮೆಟ್ ಎಂದು ಹೇಳ್ತಾರೆ. ಇನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪತ್ರಿಕಾಪ್ರಕಟಣೆ ನೀಡಿದರು, ಸುದ್ದಿ ಪ್ರಸಾರ ಆದ್ರೂ ಜನರು ಮಾತ್ರ ಹೆಲ್ಮೆಟ್ ಹಾಕಲಿಲ್ಲ. ಇನ್ನು ದಂಡ ಹಾಕಿದ ಪೊಲೀಸ್ ಸಿಬ್ಬಂದಿಗಳಿಗೆ ಶಾಸಕ ಹಾಗೂ ಸಿಪಿಐ ಒತ್ತಾಯ ಹಾಕೋದ್ ಸಹ ದುರಂತವಾಗಿದೆ.

ಸ್ಥಳೀಯ ಶಾಸಕ ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯ ವರೆಗೆ ಸಂಚಾರಿ ಠಾಣೆಯ ಸಿಪಿಐಯಾಗಿ ಇರುತ್ತಾರೆ ಎನ್ನುವ ಅಂಶ ಸಹ ಬೆಳಕಿಗೆ ಬಂದಿದೆ. ಮರಳು, ಜಲ್ಲಿ, ಮರಂ ಇನ್ನಿತರ ಸರಬರಾಜಿನ ಶಾಸಕ ಹಿಂಬಾಲಕರಿಗೆ ತೊಂದರೆ ಕೊಡಬಾರದು ಎನ್ನುವ ರಾಜಿಯೊಂದಿಗೆ ಈ ಕೆಲಸ ನಡೆಯುತ್ತಿದೆ. ಇನ್ನು ಪಾಲಿಟ್ನಿನಿಕ್ ಕಾಲೇಜ್ ಹತ್ತಿರ ಆದ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತ ಪಟ್ಟರು, ಆ ಟ್ರ್ಯಾಕ್ಟರ್ ಯಾರದು ? ಎನ್ನುವ ಮಾಹಿತಿ ಬೆಳಕಿಗೆ ಬರಲಿಲ್ಲವೇ ಇದು ಸಹ ದುರಂತ ವಾಗಿದೆ.

ನಗರದ ರಸ್ತೆಯ ತುಂಬೆಲ್ಲಾ ಬಂಡಿಗಳು, ಪುಟ್ ಪಾತ್ ಮೇಲೆ ವ್ಯಾಪಾರ

ಇನ್ನು ಬಳ್ಳಾರ ನಗರದಲ್ಲಿ ಪ್ರತಿಯೊಂದು ಸ್ಥಳದಲ್ಲಿ ವ್ಯಾಪಾರ ಮಾಡುವ ಬಂಡಿಗಳು, ಎಲ್ಲೆಂದರಲ್ಲಿ ಆಟೋಗಳ ನಿಲ್ದಾಣಗಳು, ಪುಟ್ ಪಾತ್ ಮೇಲೆ ವ್ಯಾಪಾರ ಮಾಡುವ ಜನರು, ಇದರಿಂದಾಗಿ ಪಾದಚಾರಿಗಳು ರಸ್ತೆಯಲ್ಲಿ ನಡೆದು ಹೋಗುವ ಪರಿಸ್ಥಿತಿ ಉಂಟಾಗಿದೆ ಇದಕ್ಕೆ ಕಾರಣ ಸಂಚಾರ ಪೊಲೀಸ್ ಅಧಿಕಾರಿದ ನಿಲಕ್ಷ್ಯವಾಗಿದೆ.

ಹೊರರಾಜ್ಯದ ವಾಹನಗಳಿಗೆ ಮಾತ್ರ ದಂಡ

ಹೊರರಾಜ್ಯಗಳ ಬೈಕ್, ಕಾರು, ಲಾರಿಗಳು ಇನ್ನಿತರ ವಾಹನಗಳಿಗೆ ಕೇಸ್ ಹಾಕ್ತಾರೆ ಆದರೆ ಬಳ್ಳಾರಿ ಜಿಲ್ಲೆಯ ವಾಹನ ಸವಾರರಿಗೆ ಕೇಸ್ ಗಳನ್ನು ಹಾಕದೆ ಇರೋದು ದುರಂತ. ಇನ್ನು ಮಹಿಳೆಯರಿಗೆ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೇ ದಂಡನೆ ಇಲ್ಲ.

ಠಾಣೆಯ ಎಸ್.ಬಿ ಆಯೂಬ್ ದರ್ಪ

ಇನ್ನು ಸಂಚಾರಿ ಪೊಲೀಸ್ ಠಾಣೆಯಲ್ಲಿನ ಎಸ್.ಬಿ ಆಯೂಬ್, ಠಾಣೆಯ ಸಿಪಿಐ,ಪಿಎಸ್ಐ ಗಿಂತ ಇವರ ದರ್ಪ ಹೆಚ್ಚಾಗಿದೆ. ಠಾಣೆಗೆ ಬರುವ ಸಾರ್ವಜನಿಕರಿಗೆ ಏಕವಚನ ಮಾತನಾಡೋದ್, ಅವಾಚ್ಯ ಶದ್ಭಗಳಿಂದ ಆಟೋಚಾಲಕರಿಗೆ ನಿಂದನೆ ಮಾಡೋದು ಇತನ ಕರ್ತವ್ಯ, ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಲು ಈ ಠಾಣೆಯ ಸಿಪಿಐ ಮತ್ತು ಎಸ್.ಬಿ ಆಯೂಬ್ ಕಲ್ಲಿನ ಬಂಡಿ, ಇನ್ನಿತರ ಬಂಡಿಗಳಿಗೆ ತಿಂಗಳಿಗೆ 1000 ರೂಪಾಯಿ ಸಹ ವಸೂಲಿ ಮಾಡುತ್ತಿದ್ದಾರೆ. ಆದರೆ ಟ್ರಾಫಿಕ್ ಮಾತ್ರ ಸರಿಪಡಿಸುತ್ತಿಲ್ಲದೆ ಇರೋದ್ ದುರಂತವಾಗಿದೆ.

ಬಳ್ಳಾರಿ ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಒಬ್ಬರು, ಬೈಕ್ ಸವಾರನಿಗೆ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 500 ರೂಪಾಯಿ ದಂಡ ಹಾಕಿದ್ದಾರೆ, ಈ ಬೈಕ್ ಸವಾರ ಸ್ಥಳೀಯ ಶಾಸಕರಿಗೆ ಫೋನ್ ಮಾಡಿಕೊಟ್ಟು, ಎ.ಎಸ್.ಐ.ಗೇ ನಿನಗೆ ಸರ್ಕಾರದಿಂದ ಸಂಬಳ ಬರುತ್ತದೆ ತಾನೇ ನೀನೇ 500 ಕಟ್ಟು ಎಂದು ಹೇಳಿದ ಉದಾಹರಣೆ ಇದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಇನ್ನು ಈ ಸಿಪಿಐ ಶಾಸಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಿಯಮಗಳು ಅನ್ವಯವಾಗುವುದಿಲ್ಲವೇ ?

~ನೊಂದ ಪೊಲೀಸ್ ಸಿಬ್ಬಂದಿಗಳು

ಬಾಡಿ ಕ್ಯಾಮರ ಹಾಕಲ್ಲ

ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯ ದಂಡ ಹಾಕುವ ಸಿಬ್ಬಂದಿಗಳು, ವಿವಿಧ ಠಾಣೆಯ ಎ.ಎಸ್.ಐ, ಪಿ.ಎಸ್.ಐ, ಸಿ.ಪಿ.ಐ, ಡಿವೈಎಸ್ಪಿ, ಎಸ್ಪಿ ಯಾರೂ ಸಹ ಕರ್ತವ್ಯದಲ್ಲಿ‌ ಇದ್ದಾಗ ಬಾಡಿ ಕ್ಯಾಮರ ಹಾಕದೇ ಇರೋದು ದುರಂತ.

ಬಾಡಿ ಕ್ಯಾಮರ ಹಾಕ್ತಾರೆ, ನೀವು ನೋಡಿಲ್ಲ ಎನ್ನುವ ಮಾಹಿತಿ ಎಸ್ಪಿ ಅವರು ತಿಳಿಸಿದರು. ಎಷ್ಟು ಕ್ಯಾಮರ ಇದೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಇಲ್ಲ ನೋಡಿ ಹೇಳುವೆ ಎಂದರು.

~ಡಾ.ಶೋಭಾರಾಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಬಳ್ಳಾರಿ ಜಿಲ್ಲೆ

ಒಟ್ಟಾರೆಯಾಗಿ ಬಳ್ಳಾರಿ ನಗರ ಮತ್ತು ಜಿಲ್ಲೆಯಲ್ಲಿ ಟ್ರಾಫಿಕ್ ಮುಕ್ತ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದ ಸಾರ್ವಜನಿಕ ಒತ್ತಾಯವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version