ದಿನದ ಸುದ್ದಿ
ದಾವಣಗೆರೆ | ಅ.29ರಂದು ರೈತರಿಗೆ ಸುಸ್ಥಿರ ಕೃಷಿ ತರಬೇತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಾಡಜ್ಜಿ, ಇಲ್ಲಿ ಅಕ್ಟೋಬರ್ 29 ರಂದು ಜಿಲ್ಲೆಯ ರೈತರಿಗೆ ಸುಸ್ಥಿರ ಕೃಷಿ-ಸ್ವಾವಲಂಭಿ ಜೀವನಕ್ಕಾಗಿ ನೂತನ ತಾಂತ್ರಿಕತೆಗಳ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪ್ರಗತಿ ಪರ ರೈತರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಹುಲಿಕೆರೆಯ ವಿಶ್ವೇಶ್ವರ ಹೆಚ್ ಸಜ್ಜನ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ದೇವರಾಜ್ ಟಿ.ಎನ್. ಬೇಸಾಯ ತಜ್ಞರಾದ ಮಲ್ಲಿಕಾರ್ಜುನ ಬಿ.ಓ, ತೋಟಗಾರಿಕಾ ತಜ್ಞರಾದ ಬಸವನಗೌಡ ಎಂ.ಜಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ಸುಸ್ಥಿರ ಕೃಷಿಗೆ ಪೂರಕವಾಗಿ ಇಲಾಖೆಯಿಂದ ದೊರೆಯುವ ಯೋಜನೆಗಳ ಕುರಿತು ಮಾಹಿತಿಯನ್ನು ಉಪ ಕೃಷಿ ನಿರ್ದೇಶಕರಾದ ತಿಪ್ಪೇಸ್ವಾಮಿ.ಆರ್ ತರಬೇತಿಯಲ್ಲಿ ವಿಷಯ ಮಂಡಿಸುವರು. ತರಬೇತಿಯಲ್ಲಿ ಭಾಗವಹಿಸಲು 35 ರೈತರಿಗೆ ಮಾತ್ರ ಅವಕಾಶವಿದೆ. ಆಸಕ್ತ ರೈತ, ರೈತ ಮಹಿಳೆಯರು ಅ.26 ರೊಳಗಾಗಿ ಮೊ.ಸಂಖ್ಯೆ: 9844295795, 9901640184 ಗೆ ಸಂಪರ್ಕಿಸಿ ನೋಂದಾಯಿಸಲು ಹಾಗೂ ತರಬೇತಿಯಲ್ಲಿ ಭಾಗವಹಿಸುವ ರೈತರು ಕಡ್ಡಾಯವಾಗಿ ಎಫ್‍ಐಡಿ ಸಂಖ್ಯೆ ಅಥವಾ ಚುನಾವಣಾ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕೆಂದು ಕಾಡಜ್ಜಿಯ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243