ದಿನದ ಸುದ್ದಿ

ರಾಷ್ಟ್ರಪತಿ ಚುನಾವಣೆಗೆ ಬುಡಕಟ್ಟು ಜನಾಂಗದ ಅಭ್ಯರ್ಥಿ’ಗೆ ಮಣೆ ಹಾಕಿದ ಬಿಜೆಪಿ

Published

on

ಸುದ್ದಿದಿನ,ನವದೆಹಲಿ: ಮುಂಬರುವ ರಾಷ್ಟ್ರಪತಿ ಅಭ್ಯರ್ಥಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷಗಳು ಬಿಜೆಪಿ ಹಿರಿಯ ಮುಖಂಡ ದ್ರೌಪದಿ ಮುರ್ಮು ಅವರ ಹೆಸರನ್ನು ಅಧಿಕೃತವಾಗಿ ಇಂದು ಘೋಷಣೆ ಮಾಡಿದೆ.

ದ್ರೌಪದಿ ಮುರ್ಮು ಅವರು 2015 ರಿಂದ 2021ರ ಅವಧಿಯಲ್ಲಿ ಜಾರ್ಖಂಡ್‌ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಈಗ 16ನೇ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಮೂಲತಃ ದ್ರೌಪದಿ ಮುರ್ಮು ಅವರು ಒಡಿಸ್ಸಾದ ಮಾಯರ್ಭಾಂಜ್‌ ಜಿಲ್ಲೆಯವರಾಗಿದ್ದಾರೆ. ಇವರು ಬುಡಕಟ್ಟು ಜನಾಂಗ ಮೂಲದ ಮಹಿಳೆಯಾಗಿದ್ದು, ಪಕ್ಷದ ನೇತೃತ್ವದಲ್ಲಿ ನಾನಾ ಸ್ಥಾನಗಳನ್ನು ಅಲಂಕರಿಸಿ ಬಿಜೆಪಿ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದಾರೆ.

ಇತ್ತೀಚೆಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸೇವಾವಧಿ ಮುಕ್ತಾಯ ಗೊಂಡಿತ್ತು. ತೆರವು ಆದ ಸ್ಥಾನಕ್ಕೆ ಚುನಾವಣಾ ಘೋಷಣೆ ಯಾದ ಬೆನ್ನಲೇ ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಯಾದ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version