ಲೈಫ್ ಸ್ಟೈಲ್

ಕೀಟಗಳ ನಿರ್ವಹಣೆಗೆ ಟ್ರೈಕೋಗ್ರಾಮಕಾರ್ಡ್

Published

on

ಸುದ್ದಿದಿನ,ದಾವಣಗೆರೆ : ಭತ್ತ ಮತ್ತು ಹತ್ತಿ ಬೆಳೆಗಳಲ್ಲಿನ ಕೀಟಗಳನ್ನು ನಿರ್ವಹಣೆ ಮಾಡುವುದು ಬಹಳ ಮುಖ್ಯವಾಗಿದ್ದು, ಈ ಕೀಟಗಳನ್ನು ಜೈವಿಕ ವಿಧಾನಗಳಿಂದ ನಿರ್ವಹಣೆ ಮಾಡಲು ರೈತರು ಟ್ರೈಕೋಗ್ರಾಮ ಪರತಂತ್ರ ಜೀವಿಗಳನ್ನು ಬಳಸಬಹುದಾಗಿದೆ.

ಟ್ರೈಕೋಗ್ರಾಮಾವು ಕಣಜ ಜಾತಿಗೆ ಸೇರಿದ ಅತಿ ಸೂಕ್ಷ್ಮಕೀಟವಾಗಿದ್ದು. 8 ರಿಂದ 10 ಕಣಜಗಳು ಒಂದು ಗುಂಡು ಸೂಜಿಯ ತಲೆಯ ಮೇಲೆ ಕುಳಿತು ಕೊಳ್ಳಬಹುದಾದಷ್ಟು ಸೂಕ್ಷ್ಮ ಕೀಟವಾಗಿರುತ್ತದೆ. ಕಪ್ಪು ಬಣ್ಣದಿಂದ ಕೂಡಿದ ಈ ಟ್ರೈಕೋಗ್ರಾಮ 200 ವಿವಿಧ ಆಶ್ರಯ ಕೀಟಗಳ ಮೊಟ್ಟೆಯ ಒಳಗೆ ಪರಾವಲಂಬಿಯಾಗಿ ಜೀವಿಸುತ್ತದೆ. ಮೊಟ್ಟೆ ಹಂತದಲ್ಲಿಯೇ ಶತ್ರು ಕೀಟಗಳಾದ ಸುಳಿಕೊರಕ, ಕಾಂಡಕೊರಕ, ಕಾಯಿಕೊರಕ ನಾಶಪಡಿಸುತ್ತದೆ.

ಮೊಟ್ಟೆ ಪರತಂತ್ರ ಜೀವಿಯಾದ ಈ ಟ್ರೈಕೋಗ್ರಾಮವನ್ನು ಪ್ರಯೋಗಾಲಯಗಳಲ್ಲಿ ಸುಲಭವಾಗಿ ಅಭಿವೃದ್ಧಿಗೊಳಿಸಬಹುದಾಗಿದ್ದು, ಈ ಕಾರ್ಯವನ್ನು ದಾವಣಗೆರೆ ಜಿಲ್ಲೆಯ ಜೈವಿಕ ನಿಯಂತ್ರಣ ಪ್ರಯೋಗಾಲಯ, ಕಾಡಜ್ಜಿಯಲ್ಲಿ ಉತ್ಪಾದಿಸಲಾಗುತ್ತಿದೆ.

ಮಾಹಿತಿಗಾಗಿ ಹಾಗೂ ಟ್ರೈಕೋಗ್ರಾಮಕಾರ್ಡ್‍ಗಳನ್ನು ಪಡೆಯಲು ಇಚ್ಛಿಸುವವರು ಕೃಷಿ ಅಧಿಕಾರಿ ಬಿ.ವಿ.ಸುಧಾ, ದೂ.ಸಂ- 8277931254 ಜೈವಿಕ ನಿಯಂತ್ರಣ ಪ್ರಯೋಗಾಲಯ, ಕಾಡಜ್ಜಿ ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version